ಮುನ್ನಾಭಾಯ್ ಜೀವನಾಧಾರಿತ ಚಿತ್ರದಲ್ಲಿ ಬಣ್ಣ ಹಚ್ಚುತ್ತಿರುವುದು ಯಾರು ಗೊತ್ತಾ...!

ನಾಗಶ್ರೀ ಭಟ್

ಶುಕ್ರವಾರ, 2 ಫೆಬ್ರವರಿ 2018 (16:07 IST)
ಬಾಲಿವೂಡ್‌ನಲ್ಲಿ ದಿನಕ್ಕೊಂದು ಹೊಸ ರೀತಿಯ ಕಥೆಗಳನ್ನು ಒಳಗೊಂಡ ಚಿತ್ರಗಳು ಬರುತ್ತಿರುವ ಬೆನ್ನಲ್ಲೇ ಬಾಲಿವೂಡ್ ಕಾ ಭಾಯ್ ಮುನ್ನಾಭಾಯ್  ಅವರ ಜೀವನಾಧಾರಿತ ಚಿತ್ರ ಕೂಡಾ ತೆರೆಗೆ ಬರಲು ತಯಾರಿ ನೆಡೆಸುತ್ತಿದೆ. ಈಗಾಗಲೇ ಚಿತ್ರಕ್ಕೆ ಬೇಕಾದ ಪಾತ್ರಗಳ ಪಟ್ಟಿಯನ್ನು ತಯಾರಿಸಲಾಗಿದ್ದು  ಯಾರು ಯಾವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ಇದೀಗ ಬಹಿರಂಗಗೊಂಡಿದೆ. ನಿಮಗೂ ಈ ಚಿತ್ರದಲ್ಲಿ ಯಾರು ನಟಿಸುತ್ತಿದ್ದಾರೆ ಎಂದು ತಿಳಿಯುವ ಕೂತುಹಲವಿದ್ರೆ ಈ ವರದಿಯನ್ನು ಓದಿ.
 
 
ಅಭಿಮಾನಿಗಳ ಪಾಲಿಗೆ ಮುನ್ನಾಭಾಯ್ ಆಗಿ ಬಾಲಿವೂಡ್ ರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಬಹು ಬೇಡಿಕೆಯ ನಟ ಸಂಜಯ್ ದತ್ ಅವರ  ಜೀವನಚರಿತ್ರೆಯಲ್ಲಿ ಹಲವು ತಿರುವುಗಳಿದ್ದು ಅವರ ಜೀವನ ಚರಿತ್ರೆ ತುಂಬಾನೇ ಕುತೂಹಲಕಾರಿಯಾಗಿದೆಯಂತೆ, ಈ ಚಿತ್ರದಲ್ಲಿ ದತ್ ಅವರ ಪಾತ್ರವನ್ನು ರಣಬೀರ್ ಕಪೂರ್‌ ನಿರ್ವಹಿಸುತ್ತಿದ್ದು, ಈ ಚಿತ್ರಕ್ಕೆ 3 ಇಡಿಯಟ್ಸ್ ಮತ್ತು ಪಿಕೆ ಚಿತ್ರ ಕಥೆಗಳನ್ನು ಬರೆದಿರುವ ಅಭಿಜಿತ್ ಜೋಶಿ ಮತ್ತು ರಾಜು ಹಿರಾನಿ ಸಂಜು ಎನ್ನೋ ಹೆಸರಿನಡಿಯಲ್ಲಿ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರಂತೆ. ಸಂಜಯ್ ದತ್ ಅವರ ತಂದೆಯ ಪಾತ್ರದಲ್ಲಿ ಪಾರೇಶ್ ರಾವಲ್ 
ಕಾಣಿಸಿಕೊಳ್ಳುತ್ತಿದ್ದು, ಸಂಜಯ್ ದತ್ ಪತ್ನಿ ಮಾನಯತಾ ಪಾತ್ರದಲ್ಲಿ ಲಗೇ ರಹೋ ಮುನ್ನಾಭಾಯಿ ಚಿತ್ರದಲ್ಲಿ ನಟಿಸಿದ್ದ ದಿಯಾ ಮಿರ್ಜಾ ನಟಿಸುತ್ತಿದ್ದಾರಂತೆ. 
 
ಅಲ್ಲದೇ 1990 ರ ದಶಕದ ಸಂಜಯ್ ದತ್ ಅವರ ಲವ್ ಕಹಾನಿಯಲ್ಲಿ ಬರುವ ಪ್ರೇಯಸಿಯ ಪಾತ್ರದಲ್ಲಿ ಸೋನಮ್ ಕಪೂರ್ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲ ಪಿಕೆ ಚಿತ್ರದಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಗಮನ ಸೆಳೆದಿದ್ದ ಅನುಷ್ಕಾ ಶರ್ಮಾ ಸಂಜಯ್ ಅವರ ಆತ್ಮಕಥೆಯನ್ನು ಬರೆಯುವ ಬರಹಗಾರ್ತಿಯಾಗಿ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಸಂಜಯ್ ಅವರ ತಂಗಿಯಾಗಿರುವ ಪ್ರಿಯಾ ದತ್ ಪಾತ್ರದಲ್ಲಿ ಅದಿತಿ ಸಿಯಾ ಕಾಣಿಸಿಕೊಳ್ಳುತ್ತಿರುವುದು ವಿಶೇಷವೆಂದೇ ಹೇಳಬಹುದು.
 
ಸಂಜಯ್ ದತ್ ಅವರ ಜೀವನದ ಕುರಿತು ಹೇಳುವುದಾದರೆ ನರ್ಗೀಸ್ ಪಾತ್ರ ಅತೀ ಪ್ರಮುಖವಾಗಿದ್ದು, ಸಂಜಯ್ ಅವರ ಸಂಪೂರ್ಣ ಜೀವನ ಬದಲಾಗಿದ್ದು ಇಲ್ಲಿಂದಲೇ ಎಂದು ಹೇಳಬಹುದು. ಹಾಗಾಗಿ ಚಿತ್ರದಲ್ಲಿನ ಈ ಪಾತ್ರ ತುಂಬಾ ಪ್ರಮುಖವಾಗಿದ್ದು ಈ ಪಾತ್ರವನ್ನು ಮನೀಶಾ ಕೊಯಿರಾಲಾ ನಿಭಾಯಿಸುತ್ತಿದ್ದಾರಂತೆ.
 
ಬಹುತಾರಾಗಣವನ್ನು ಹೊಂದಿರುವ ಈ ಚಿತ್ರಕ್ಕೆ ವಿಧು ವಿನೋದ್ ಚೋಪ್ರಾ ನಿರ್ಮಾಪಕರಾಗಿದ್ದು, ಜೂನ್ 29 ರಂದು ಈ ಚಿತ್ರ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಬಾಲಿವೂಡ್‌ನಲ್ಲಿ ತಮ್ಮ ವಿಶಿಷ್ಟವಾದ ಮ್ಯಾನರಿಸಂ‌ನಿಂದ ತಮ್ಮದೇ ಆದ ದೊಡ್ಡ ಅಭಿಮಾನಿ 
 
ಬಳಗವನ್ನು ಹೊಂದಿರುವ ಮುನ್ನಾಭಾಯ್ ಜೀವನಚರಿತ್ರೆ ಆಧರಿಸಿರುವ ಈ ಚಿತ್ರವನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದು, ಈ ಚಿತ್ರ ತುಂಬಾ ನಿರೀಕ್ಷೆಯನ್ನು ಹುಟ್ಟುಹಾಕಿರುವುದಂತು ಸುಳ್ಳಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಪತಿಯ ಶತಕ ಮತ್ತು ಗೆಲುವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಅನುಷ್ಕಾ ಶರ್ಮಾ...!!