Select Your Language

Notifications

webdunia
webdunia
webdunia
webdunia

ಪತಿಯ ಶತಕ ಮತ್ತು ಗೆಲುವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಅನುಷ್ಕಾ ಶರ್ಮಾ...!!

ಪತಿಯ ಶತಕ ಮತ್ತು ಗೆಲುವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಅನುಷ್ಕಾ ಶರ್ಮಾ...!!

ನಾಗಶ್ರೀ ಭಟ್

ಮುಂಬೈ , ಶುಕ್ರವಾರ, 2 ಫೆಬ್ರವರಿ 2018 (15:45 IST)
ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿನ ವಿರಾಟ್ ಕೊಹ್ಲಿಯ ಅದ್ಭುತ ಆಟ ಖಂಡಿತವಾಗಿಯೂ ಹಲವಾರು ಮುಖಗಳಲ್ಲಿ ನಗುವನ್ನು ಅರಳಿಸಿದೆ. ಆದರೆ ವಿರಾಟ್ ಪತ್ನಿ ಮತ್ತು ಪ್ರೇಮಿ ಅನುಷ್ಕಾ ವಿಶೇಷವಾಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ತಮ್ಮ 33 ನೇ ಏಕದಿನ ಪಂದ್ಯದ ಶತಕವನ್ನು ಗಳಿಸಿದರು ಮತ್ತು 119 ಎಸೆತಗಳಲ್ಲಿ 112 ರನ್‌ಗಳನ್ನು ಗಳಿಸಿ ಔಟ್ ಆಗಿ ಪೆವಿಲಿಯನ್ ಸೇರಿದರು. ಆದರೂ ಕೊಹ್ಲಿ ಮತ್ತು ರಹಾನೆಯ ದಾಖಲೆಯ ಅದ್ಭುತ ಪಾರ್ಟ್‌ನರ್‌ಶಿಪ್ ಕಾರಣ ತಂಡ ಅದಾಗಲೇ ಗೆಲುವಿನ ಹೊಸ್ತಿಲಿನಲ್ಲಿತ್ತು.
webdunia
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾದಾಗಿನಿಂದ ವಿರುಷ್ಕಾ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಸಂದೇಶಗಳನ್ನು ಹಂಚಿಕೊಳ್ಳುತ್ತಿರುತ್ತಾರೆ ಮತ್ತು ಗುರುವಾರವೂ ಸಹ ಇದಕ್ಕೆ ಹೊರತಾಗಿರಲಿಲ್ಲ. ಅನುಷ್ಕಾ ವಿರಾಟ್ ಶತಕದ ನಂತರ ವಿರಾಟ್ ಫೋಟೋ ಮೇಲೆ 'What a guy' ಎಂದು ಬರೆದು ಹೃದಯದ ಸ್ಟಿಕ್ಕರ್ ಅನ್ನು ಹಾಕಿ ಅದನ್ನು ತಮ್ಮ ಇನ್ಸ್ಟಾಗ್ರಾಮ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಕೊಹ್ಲಿ ಶತಕದ ಇನ್ನೊಂದು ಫೋಟೋ ಮೇಲೆ ಎರಡು ಹೃದಯದ ಸ್ಟಿಕ್ಕರ್‌ಗಳ ನಡುವೆ 100 ಎನ್ನುವ ಸ್ಟಿಕ್ಕರ್ ಅನ್ನು ಹಾಕಿ ಅದನ್ನು ಮತ್ತು ಭಾರತ ಜಯಗಳಿಸಿದ ಇನ್ನೊಂದು ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಹೀಗೆ ಅನುಷ್ಕಾ ತಮ್ಮ ಖುಷಿಯನ್ನು ಹಂಚಿಕೊಂಡು ವಿರಾಟ್ ಕುರಿತಾದ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
webdunia
ನಿನ್ನೆ ಭಾರತ ಈ ಸರಣಿಯ ಮೊದಲ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ಎರಡು ವರ್ಷದಿಂದ ತವರಿನಲ್ಲಿ ಸತತವಾಗಿ 17 ಪಂದ್ಯಗಳನ್ನು ಗೆಲ್ಲುತ್ತಾ ಬಂದಿದ್ದ ರೆಕಾರ್ಡ್‌ಗೆ ಟೀಂ ಇಂಡಿಯಾ ಬ್ರೇಕ್ ಹಾಕಿದೆ ಹಾಗೂ 7 ವರ್ಷಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇದು ಭಾರತದ ಮೊದಲ ಗೆಲುವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

82 ವರ್ಷದ ಅಜ್ಜಿಯ ಪ್ರೀತಿಗೆ ಮೂಕರಾದ ಕಿಚ್ಚ ಸುದೀಪ್! (ವಿಡಿಯೋ)