Publish Date: Fri, 02 Feb 2018 (09:20 IST)
Updated Date: Fri, 02 Feb 2018 (09:23 IST)
ಡರ್ಬನ್: ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತವಾಗಿ ರನ್ ಚೇಸ್ ಮಾಡಿ ತಾನು ಚೇಸಿಂಗ್ ನಲ್ಲಿ ಎಂತಹಾ ನಿಸ್ಸೀಮ ಎನ್ನುವುದನ್ನು ವಿರಾಟ್ ಕೊಹ್ಲಿ ನಿರೂಪಿಸಿದ್ದಾರೆ.
ಆದರೆ ಮೊದಲು ದ.ಆಫ್ರಿಕಾ ಬ್ಯಾಟಿಂಗ್ ಮಾಡುತ್ತಿದ್ದಾಗ ವಿರಾಟ್ ಕೊಹ್ಲಿ ಕೆಲ ಕಾಲ ಅಭಿಮಾನಿಗಳಿಗೆ, ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಟೆನ್ ಷನ್ ನೀಡಿದರು. ಅದಕ್ಕೆ ಕಾರಣ ಫೀಲ್ಡಿಂಗ್ ಮಾಡುವಾಗ ಕೊಹ್ಲಿ ಜಾರಿ ಬಿದ್ದಿದ್ದು.
ಕಾಲಿಗೆ ಲಘುವಾಗಿ ಪೆಟ್ಟು ಮಾಡಿಕೊಂಡ ಕೊಹ್ಲಿ ಎರಡು ಬಾರಿ ಪೆವಿಲಿಯನ್ ಗೆ ಮರಳಿ ಐಸ್ ಪ್ಯಾಕ್ ಇಟ್ಟು ಬಂದರು. ಇದನ್ನು ನೋಡಿ ಚೇಸಿಂಗ್ ನಲ್ಲಿ ಏನಪ್ಪಾ ಗತಿ ಎಂದು ಅಭಿಮಾನಿಗಳಿಗೆ ಆತಂಕವಾಗಿದ್ದು ನಿಜ. ಆದರೆ ಬ್ಯಾಟಿಂಗ್ ಸರದಿ ಬಂದಾಗ ಏನೂ ಆಗೇ ಇಲ್ಲವೆಂಬಂತೆ ಬಂದು ಎಂದಿನಂತೆ ಬ್ಯಾಟ್ ಬೀಸಿದಾಗ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ