Publish Date: Thu, 01 Feb 2018 (08:14 IST)
Updated Date: Thu, 01 Feb 2018 (08:20 IST)
ಡರ್ಬನ್: ಭಾರತ ಮತ್ತು ದ.ಆಫ್ರಿಕಾ ನಡುವೆ ಟೆಸ್ಟ್ ಸರಣಿಯ ಕಹಿ ಮರೆಯಾಗುವ ಬೆನ್ನಲ್ಲೇ ಏಕದಿನ ಸರಣಿ ಆರಂಭವಾಗುತ್ತಿದೆ.
ಇಂದಿನಿಂದ ಆರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದ್ದು, ಧೋನಿ ಆಗಮನದೊಂದಿಗೆ ಭಾರತೀಯ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಿದೆ.
ಈ ಸರಣಿ ಗೆದ್ದರೆ ಭಾರತಕ್ಕೆ ನಂ.1 ಪಟ್ಟ ಮಾತ್ರವಲ್ಲ, ಆಫ್ರಿಕಾ ನೆಲದಲ್ಲಿ ಮೊದಲ ಬಾರಿ ಏಕದಿನ ಸರಣಿ ಗೆದ್ದ ಗೌರವವೂ ಸಿಗುತ್ತದೆ. ಹೆಚ್ಚು ಕಡಿಮೆ ಅದೇ ತಂಡದೊಂದಿಗೆ ಭಾರತ ಕಣಕ್ಕಿಳಿಯುತ್ತಿದ್ದರೂ ಧೋನಿ ತಂಡದ ಬಲ ಹೆಚ್ಚಿಸಲಿದ್ದಾರೆ. ಧೋನಿಯ ಅನುಭವ ಸೊರಗಿರುವ ತಂಡಕ್ಕೆ ಉಪಯುಕ್ತವಾಗಲಿದೆ.
ಆದರೆ ಏಕದಿನ ಫಾರ್ಮ್ಯಾಟ್ ಟೆಸ್ಟ್ ಗೆ ಹೋಲಿಸಿದರೆ ಸಂಪೂರ್ಣ ವ್ಯತ್ಯಸ್ತವಾಗಿರುತ್ತದೆ. ಭಾರತದಲ್ಲಿ ಪ್ರತಿಭಾವಂತರಿಗೇನೂ ಕೊರತೆಯಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿಂತು ಆಡಿದರೆ ಇಬ್ಬರೇ ಸಾಕು ಆಫ್ರಿಕಾವನ್ನು ಮಟ್ಟ ಹಾಕಲು. ಆದರೆ ಯಾವುದಕ್ಕೂ ಮನಸ್ಸು ಮಾಡಬೇಕಷ್ಟೇ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ