ಈ ಟೀಂ ಇಂಡಿಯಾ ಕ್ರಿಕೆಟಿಗನ ಖರೀದಿಸದ್ದಕ್ಕೆ ಬೇಸರದಲ್ಲಿರುವ ನೀತಾ ಅಂಬಾನಿ

ಮಂಗಳವಾರ, 30 ಜನವರಿ 2018 (08:24 IST)
ಮುಂಬೈ: ಐಪಿಎಲ್ ಬಿಡ್ಡಿಂಗ್ ನಿನ್ನೆಯಷ್ಟೇ ಮುಗಿದಿದೆ. ಇದರೊಂದಿಗೆ ಎಲ್ಲಾ ಫ್ರಾಂಚೈಸಿಗಳೂ ತಮ್ಮ ತಂಡಕ್ಕೆ ಘಟಾನುಘಟಿ ಆಟಗಾರರನ್ನು ಖರೀದಿಸಿದ ಖುಷಿಯಲ್ಲಿದ್ದಾರೆ.
 

ಆದರೆ ಮುಂಬೈ ಇಂಡಿಯನ್ಸ್ ಮಾಲಕಿ ನೀತಾ ಅಂಬಾನಿ ಮಾತ್ರ ಬೇಸರದಲ್ಲಿದ್ದಾರೆ. ಅದಕ್ಕೆ ಕಾರಣ ಅವರು ಬಯಸಿದ್ದ ಟೀಂ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ರನ್ನು ಖರೀದಿಸಲು ಸಾಧ್ಯವಾಗದೇ ಇರುವುದು.

ನಾವು ಹಲವು ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿರಬಹುದು. ಆದರೆ ಭಜಿಯನ್ನು ಖರೀದಿಸಬೇಕಾಗಿತ್ತು. ಆದರೆ ಸಾಧ್ಯವಾಗಿಲ್ಲ ಎಂದು ನೀತಾ ಬೇಸರದಿಂದಲೇ ಹೇಳಿಕೊಂಡಿದ್ದಾರೆ. ಭಜಿ ಈ ಬಾರಿ 2 ಕೋಟಿ ರೂ. ಮೌಲ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹರಾಜಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೆಲ್ಲುತ್ತಿದ್ದ ಹಾಗೇ ವಿರಾಟ್ ಕೊಹ್ಲಿ ಮೇಲಿನ ದ.ಆಫ್ರಿಕನ್ನರ ವರಸೆಯೇ ಬದಲಾಯ್ತು!