ಟೀಂ ಇಂಡಿಯಾದಲ್ಲಿ ಕಪಿಚೇಷ್ಠೆ ಮಾಡುವ ಆ ಆಟಗಾರನ ಹೆಸರು ಹೇಳಿದ ಗೌತಮ್ ಗಂಭೀರ್

ಬುಧವಾರ, 20 ಡಿಸೆಂಬರ್ 2017 (09:40 IST)
ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಅತೀ ಹೆಚ್ಚು ತಮಾಷೆ ಮಾಡುವ ಚೇಷ್ಠೆ ಮಾಡುವ ಕ್ರಿಕೆಟಿಗ ಯಾರು? ಈ ಪ್ರಶ್ನೆಗೆ ಕ್ರಿಕೆಟಿಗ ಗೌತಮ್ ಗಂಭೀರ್ ಉತ್ತರಿಸಿದ್ದಾರೆ.
 

ಸಂದರ್ಶನವೊಂದರಲ್ಲಿ ಈ ವಿಷಯ ಬಹಿರಂಗಪಡಿಸಿರುವ ಗೌತಮ್ ಗಂಭೀರ್ ತಮ್ಮ ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಅತೀ ಹೆಚ್ಚು ತಮಾಷೆ ಮಾಡುತ್ತಾ ಇನ್ನೊಬ್ಬರ ಕಾಲೆಳೆಯುತ್ತಾ ಇದ್ದ ವ್ಯಕ್ತಿ ಎಂದರೆ ಹರ್ಭಜನ್ ಸಿಂಗ್ ಎಂದಿದ್ದಾರೆ.

ಹರ್ಭಜನ್ ಜತೆಯಿದ್ದರೆ ನಮಗೆ ಬೇಜಾರಾಗೋದು ಎನ್ನುವುದೇ ಇಲ್ಲ. ಅವರು ತಾವೂ ನಗುತ್ತಾ, ಇನ್ನೊಬ್ಬರನ್ನೂ ನಗಿಸುತ್ತಾ ವಾತಾವರಣವನ್ನು ಖುಷಿಯಾಗಿ ಇಡುತ್ತಾರೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಹರ್ಭಜನ್ ಮತ್ತು ಯುವರಾಜ್ ಸಿಂಗ್ ಸಚಿನ್ ತೆಂಡುಲ್ಕರ್ ಮತ್ತು ಸೌರವ್ ಗಂಗೂಲಿಯನ್ನೂ ಬಿಡದೇ ಕಾಲೆಳೆಯುತ್ತಿದ್ದರು ಎಂದು ಈ ಹಿಂದೆಯೂ ಹಲವು ಕ್ರಿಕೆಟಿಗರು ಹೇಳಿಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬೆಂಗಳೂರಲ್ಲಿ ನಡೆಯಲಿದೆ ಐಪಿಎಲ್ ಆಟಗಾರರ ಸೇಲ್!