ಬೆಂಗಳೂರಲ್ಲಿ ನಡೆಯಲಿದೆ ಐಪಿಎಲ್ ಆಟಗಾರರ ಸೇಲ್!

ಬುಧವಾರ, 20 ಡಿಸೆಂಬರ್ 2017 (08:47 IST)
ಬೆಂಗಳೂರು: ಈ ವರ್ಷದ ಐಪಿಎಲ್ ಆವೃತ್ತಿಗೆ ಆಟಗಾರರ  ಹರಾಜು ಪ್ರಕ್ರಿಯೆ ದಿನಾಂಕ ನಿಗದಿಯಾಗಿದ್ದು, ಇದು ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ನಡೆಯಲಿದೆ.
 

ಜನವರಿ 27 ಮತ್ತು 28 ರಂದು ಈ ಹಿಂದಿನಂತೆಯೇ ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ. ಈ ಮೊದಲಿನ ಆವೃತ್ತಿಯ ಹರಾಜು ಪ್ರಕ್ರಿಯೆಗೂ ಫ್ರಾಂಚೈಸಿಗಳು ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿದ್ದವು.

ಈ ಬಾರಿ ಪ್ರತಿ ತಂಡದ ಬಿಡ್ಡಿಂಗ್ ಬಜೆಟ್ ನ್ನು 66 ಕೋಟಿ ರೂ. ನಿಂದ 80 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಪ್ರತೀ ತಂಡವು ಐದು ಮೂಲ ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಉಳಿದ ಆಟಗಾರರು ಹರಾಜು ಪ್ರಕ್ರಿಯೆಗೆ ಒಳಗಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿರಾಟ್-ಅನುಷ್ಕಾ ಭಾರತದಲ್ಲೇ ಮದುವೆಯಾಗಿಲ್ಲ ಯಾಕೆ? ಬಿಜೆಪಿ ನಾಯಕನ ಶಾಕಿಂಗ್ ಆರೋಪ!