Publish Date: Wed, 20 Dec 2017 (08:27 IST)
Updated Date: Wed, 20 Dec 2017 (08:30 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಮ್ಮ ದೇಶ ಭಾರತವನ್ನು ಬಿಟ್ಟು ಇಟೆಲಿಯಲ್ಲಿ ಮದುವೆಯಾಗಿರುವುದಕ್ಕೆ ಬಿಜೆಪಿ ಶಾಸಕರೊಬ್ಬರು ಕಿಡಿ ಕಾರಿದ್ದಾರೆ.
ಬಿಜೆಪಿ ಶಾಸಕ ಪನ್ನಾಲಾಲ್ ಸಕ್ಯಾ ವಿರಾಟ್ ಮತ್ತು ಅನುಷ್ಕಾ ವಿದೇಶದಲ್ಲಿ ಮದುವೆಯಾಗಿರುವ ಕಾರಣಕ್ಕೆ ಅವರ ದೇಶ ಭಕ್ತಿಯನ್ನೇ ಪ್ರಶ್ನಿಸಿದ್ದಾರೆ.
‘ಭಾರತ ರಾಮ, ಕೃಷ್ಣ, ಯುಧಿಷ್ಠಿರನಂತಹ ಶ್ರೇಷ್ಠರು ಮದುವೆಯಾದ ಭೂಮಿ. ವಿರಾಟ್ ಮತ್ತು ಅನುಷ್ಕಾ ಹೆಸರು, ಹಣ ಗಳಿಸಿರುವುದು ಭಾರತದಲ್ಲಿ. ಹಾಗಿರುವಾಗ ಮದುವೆಯಾಗಲು ಇಟೆಲಿಯನ್ನು ಆಯ್ಕೆ ಮಾಡಿಕೊಂಡರೇಕೆ?’ ಎಂದು ಬಿಜೆಪಿ ಶಾಸಕ ಪನ್ನಾಲಾಲ್ ಪ್ರಶ್ನಿಸಿದ್ದಾರೆ.
ಡಿಸೆಂಬರ್ 11 ರಂದು ಈ ಜೋಡಿ ಇಟೆಲಿಯಲ್ಲಿ ವಿವಾಹವಾಗಿತ್ತು. ಡಿಸೆಂಬರ್ 21 ರಂದು ಮುಂಬೈನಲ್ಲಿ ಆರತಕ್ಷತೆ ಏರ್ಪಡಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ