Publish Date: Tue, 19 Dec 2017 (17:53 IST)
Updated Date: Tue, 19 Dec 2017 (18:03 IST)
ಪಾಕಿಸ್ತಾನ: ಟೀ ಇಂಡಿಯಾ ನಾಯಕರಾದ ವಿರಾಟ್ ಕೊಹ್ಲಿ ಜಗತ್ತಿನ ಬೆಸ್ಟ್ ಬ್ಯಾಟ್ಸ್ ಮನ್ ಎಂದು ಹೆಸರುವಾಸಿಯಾದವರು. ಎಲ್ಲಾ ಆಟಗಾರರಿಗೂ ಈಗ ಕೊಹ್ಲಿಯಂತೆ ಆಡಬೇಕು ಅಂತ ಅನಿಸೋದು ಸಹಜ.
ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ ಮನ್ ಬಾಬರ್ ಅಜಮ್ ಅವರು ಚೆನ್ನಾಗಿ ಆಟ ಆಡುತ್ತಿರುವುದನ್ನು ಕಂಡು ಅವರನ್ನು ಎಲ್ಲರೂ ಕೊಹ್ಲಿಗೆ ಹೋಲಿಸುತ್ತಿರುತ್ತಾರೆ. ಹಾಗೆ ಪಾಕಿಸ್ತಾನ ತಂಡದ ಕೋಚ್ ಮಿಕ್ಕಿ ಆರ್ಥರ್ ಕೂಡ ಅದೇ ರೀತಿಯಾಗಿ ಹೋಲಿಸಿದರು.
ತಮ್ಮನ್ನು ಕೊಹ್ಲಿಗೆ ಹೋಲಿಸಿದ ಕೋಚ್ ಗೆ ಅಜಮ್ ಸರಿಯಾದ ತಿರುಗೇಟು ಕೊಟ್ಟಿದ್ದಾರೆ.
ಕೊಹ್ಲಿ ಜಗತ್ತಿನ ನಂಬರ್ ವನ್ ಆಟಗಾರ, ನಾನೇ ಬೇರೆ, ಕೊಹ್ಲಿಯೇ ಬೇರೆ. ತನ್ನನ್ನು ಅವರಿಗೆ ಹೋಲಿಸಬೇಡಿ. ಪಾಕಿಸ್ತಾನ ತಂಡಕ್ಕಾಗಿ ಚೆನ್ನಾಗಿ ಆಡಬೇಕು ಅನ್ನೋದು ತನ್ನ ಉದ್ದೇಶ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ