Select Your Language

Notifications

webdunia
webdunia
webdunia
webdunia

‘ಲಂಕಾ ವಿರುದ್ಧ ಪದೇ ಪದೇ ಸರಣಿ ಆಡಿ ನಯಾ ಪೈಸೆ ಲಾಭ ಆಗಿಲ್ಲ’

‘ಲಂಕಾ ವಿರುದ್ಧ ಪದೇ ಪದೇ ಸರಣಿ ಆಡಿ ನಯಾ ಪೈಸೆ ಲಾಭ ಆಗಿಲ್ಲ’
ಮುಂಬೈ , ಸೋಮವಾರ, 22 ಜನವರಿ 2018 (08:38 IST)
ಮುಂಬೈ: ಟೀಂ ಇಂಡಿಯಾ ದ.ಆಫ್ರಿಕಾ ಪಿಚ್ ನಲ್ಲಿ ಆಡಲು ತಡವರಿಸುತ್ತಿರುವುದಕ್ಕೆ ಕ್ರಿಕೆಟ್ ವೇಳಾಪಟ್ಟಿಯನ್ನೂ ದೂಷಿಸಲಾಗುತ್ತಿದೆ. ಆಗಾಗ ಶ್ರೀಲಂಕಾ ಒಂದೇ ತಂಡದ ವಿರುದ್ಧ ಆಡಿದ್ದಕ್ಕೂ ಅಭಿಮಾನಿಗಳು ಈಗ ಟೀಕಿಸುತ್ತಿದ್ದಾರೆ. ಇದೀಗ ಆ ಸಾಲಿಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿಕೊಂಡಿದ್ದಾರೆ.
 

ಪದೇ ಪದೇ ಶ್ರೀಲಂಕಾ ವಿರುದ್ಧ ಸರಣಿ ಆಡಿ ಟೀಂ ಇಂಡಿಯಾ ಯಾವ ಲಾಭವನ್ನೂ ಪಡೆದುಕೊಂಡಿಲ್ಲ. ಅದರಲ್ಲೂ ಕೊನೆಯ ಬಾರಿಗೆ ತವರಿನಲ್ಲಿ ನಡೆದ ಭಾರತ-ಶ್ರೀಲಂಕಾ ಸರಣಿಗೆ ಯಾವುದೇ ಅರ್ಥವಿರಲಿಲ್ಲ. ಅದರಿಂದ ನಮಗೆ ನಯಾ ಪೈಸೆ ಪ್ರಯೋಜನವಾಗಿಲ್ಲ’ ಎಂದು ಭಜಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಈ ಸರಣಿ ಆಯೋಜಿಸುವುದರ ಬದಲು ಉತ್ತಮ ಬೌನ್ಸಿ , ವೇಗದ ಪಿಚ್ ನಲ್ಲಿ ಆಡಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ತರಬೇತು ನೀಡಬಹುದಿತ್ತು ಎಂದು ಭಜಿ ಹೇಳಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್ ಈ ತಂಡಕ್ಕೆ ಸೆಲ್ಯೂಟ್ ಎಂದು ಹೇಳಲು ಕಾರಣವೇನು...?