Publish Date: Sun, 21 Jan 2018 (12:34 IST)
Updated Date: Sun, 21 Jan 2018 (12:47 IST)
ಸೆಂಚೂರಿಯನ್: ಎರಡು ಟೆಸ್ಟ್ ಪಂದ್ಯ ಸೋತರೂ ಟೀಂ ಇಂಡಿಯಾ ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಮಾನ ಉಳಿಸಿಕೊಳ್ಳಲು ದಕ್ಕಿರುವುದು ಒಂದೇ ಟೆಸ್ಟ್ ಪಂದ್ಯವಾದರೂ ಅದಕ್ಕೆ ಮೊದಲು ಅಭ್ಯಾಸ ನಡೆಸುವುದನ್ನು ಬಿಟ್ಟು ಆಫ್ರಿಕನ್ ಸಫಾರಿ ಮಾಡುತ್ತಿದೆ.
ಜೊಹಾನ್ಸ್ ಬರ್ಗ್ ನ ಕ್ರೂಗರ್ ರಾಷ್ಟ್ರೀಯ ಉದ್ಯಾನವನ ಮತ್ತು ಸನ್ ಸಿಟಿಗೆ ಭೇಟಿ ಕೊಟ್ಟಿರುವ ಕ್ರಿಕೆಟಿಗರು ಹುಲಿ, ಸಿಂಹಗಳ ಜತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ಕಳೆದ ಪಂದ್ಯಕ್ಕೆ ಮೊದಲೂ ಟೀಂ ಇಂಡಿಯಾ ಇದೇ ರೀತಿ ಕೇಪ್ ಟೌನ್ ನಗರ ಸುತ್ತಾಟ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿತ್ತು.
ಇದೀಗ ಕೆಎಲ್ ರಾಹುಲ್, ರವೀಂದ್ರ ಜಡೇಜಾ ಸೇರಿದಂತೆ ಹಲವು ಆಟಗಾರರು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಕಾಡು ಪ್ರಾಣಿಗಳೊಂದಿಗೆ ಪೋಸ್ ಕೊಟ್ಟಿರುವ ಫೋಟೋ ಪ್ರಕಟಿಸಿದ್ದಾರೆ. ಜನವರಿ 24 ರಿಂದ ಜೊಹಾನ್ಸ್ ಬರ್ಗ್ ನಲ್ಲಿ ಅಂತಿಮ ಟೆಸ್ಟ್ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ