Publish Date: Sun, 21 Jan 2018 (06:44 IST)
Updated Date: Sun, 21 Jan 2018 (06:47 IST)
ಚೆನ್ನೈ : ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಟೆಸ್ಟ್ ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದ ಹಿನ್ನಲೆಯಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ ಅವರು ಟೀಂ ಇಂಡಿಯಾಗೆ ಕಿವಿ ಮಾತುಗಳನ್ನು ಹೇಳಿದ್ದಾರೆ.
‘ಟೆಸ್ಟ್ ಪಂದ್ಯವೊಂದನ್ನು ಗೆಲ್ಲಲು 20 ವಿಕೆಟುಗಳನ್ನು ತೆಗೆಯಬೇಕು. ನಾವದನ್ನು ಮಾಡಿದ್ದೇವೆ. 20 ವಿಕೆಟ್ ಗಳನ್ನು ಕಬಳಿಸಲು ಸಾಧ್ಯವಾಗದಿದ್ದರೆ ಮುಂದೇನು? ಟೆಸ್ಟ್ ಡ್ರಾ ಮಾಡಬೇಕಾಗುತ್ತದೆ. ಕಡಿಮೆ ರನ್ ಬಿಟ್ಟುಕೊಡುವ ಹಾಗು ಹೆಚ್ಚು ರನ್ ಗಳಿಸುವ ಮೂಲಕ ಟೆಸ್ಟ್ ಡ್ರಾ ಮಾಡಬಹುದಾಗಿದೆ. ಯಾವುದೇ ಪರಿಸ್ಥಿತಿಯಲ್ಲೂ 20 ವಿಕೆಟ್ ಗಳನ್ನು ಪಡೆಯಲು ಸಾಧ್ಯವಾಗದಿದ್ದರೆ ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ನಮ್ಮ ತಂಡವು ಎದುರಾಳಿ ತಂಡದ ಎಲ್ಲ 20 ವಿಕೆಟುಗಳನ್ನು ಪಡೆದಿದ್ದಾರೆ. ಅದುವೇ ದೊಡ್ಡ ಧನಾತ್ಮಕ ಅಂಶ’ ಎಂದು ಧೋನಿ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ