Select Your Language

Notifications

webdunia
webdunia
webdunia
Tuesday, 8 April 2025
webdunia

ಮೋದಿಯ 'ಅಪ್ಪುಗೆ'ಗೆ ಕಾಂಗ್ರೆಸ್ ನವರ ಲೇವಡಿ; ಪ್ರಧಾನಿ ಕೊಟ್ಟ ತಿರುಗೇಟು ಏನು ಗೊತ್ತಾ...?

ಕಾಂಗ್ರೆಸ್
ನವದೆಹಲಿ , ಶನಿವಾರ, 20 ಜನವರಿ 2018 (11:21 IST)
ನವದೆಹಲಿ: ನಾನೊಬ್ಬ ಸಾಮಾನ್ಯ ಮನುಷ್ಯ, ನನಗೆ ಶಿಷ್ಟಾಚಾರ ಗೊತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಪ್ರಧಾನಿ ಮೋದಿ ಹೀಗೆ ಹೇಳುವುದಕ್ಕೆ ಒಂದು ಬಲವಾದ ಕಾರಣವಿದೆ. ಅದೇನೆಂದರೆ ಪ್ರಧಾನಿ ಮೋದಿ ಅವರು ವಿಶ್ವದ ನಾಯಕರಿಗೆ ಅಪ್ಪುಗೆಯ ಮೂಲಕ ಸ್ವಾಗತ ಕೋರುತ್ತಾರೆ. ಈ ಮೂಲಕ ಪ್ರಧಾನಿ ಅಪ್ಪುಗೆ-ಮುತ್ಸದ್ದಿತನವನ್ನು ತೋರುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ತಮಾಷೆ ಮಾಡಿತ್ತು. ಕಾಂಗ್ರೆಸ್ ನವರ ಈ ಲೇವಡಿಗೆ ತಿರುಗುತ್ತರವಾಗಿ ಪ್ರಧಾನಿ ಹೀಗೆ ಹೇಳಿದ್ದಾರೆ.


ಬೆಂಜಮಿನ್ ನೆತನ್ಯಾಹು, ಡೊನಾಲ್ಡ್ ಟ್ರಪ್ ಇವರಿಗೆಲ್ಲಾ ಪ್ರಧಾನಿ ಮೋದಿ ಅಪ್ಪುಗೆಯನ್ನು ನೀಡುವುದರ ಮೂಲಕ ಸ್ವಾಗತ ಕೋರಿದ್ದರು. ಇದೊಂದು ಅಪ್ಪುಗೆ-ಮುತ್ಸದ್ದಿತನದ ಪ್ರಚಾರ ತಂತ್ರ ಎಂದು ಕಾಂಗ್ರೆಸ್ ನವರು ಮೋದಿಯನ್ನು ಲೇವಡಿ ಮಾಡಿದ್ದಾರೆ.


‘ನನಗೂ ಇತರರಂತೆ ತರಬೇತಿ ಸಿಕ್ಕಿದ್ದರೆ, ನಾನೂ ಕೂಡ ಶಿಷ್ಟಾಚಾರವನ್ನು ಪಾಲಿಸುತ್ತಿದ್ದೆ, ಹಸ್ತಲಾಘವ ಮಾಡಿಕೊಂಡು ವಿಶ್ವ ನಾಯಕರ ಜತೆ ನಿಂತು ಎಡ ಬಲ ನೋಡುತ್ತಿದ್ದೆ' ಎಂದು ಪ್ರಧಾನಿ ಮೋದಿ ಕಾಂಗ್ರೆಸ್‌ಗೆ ಸರಿಯಾಗಿ ಜಾಡಿಸಿದ್ದಾರೆ.
'ನಾನೊಬ್ಬ ಸಾಮಾನ್ಯ ಮನುಷ್ಯ ನನ್ನ ದೇಶಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ' ಎಂದು ಮೋದಿ ಮಾಧ್ಯಮದೊಂದಿಗೆ ಹೇಳಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ನ ಗುಂಡಿನ ದಾಳಿಗೆ ಯೋಧ ಹಾಗೂ ಇಬ್ಬರು ನಾಗರಿಕರ ಸಾವು