ಹರ್ಭಜನ್ ಸಿಂಗ್ ಅವರು ಪಿಸಿಎ ಮೈದಾನದ ಸಿಬ್ಬಂದಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸಿದ್ದು ಹೇಗೆ ಗೊತ್ತಾ...?

ಭಾನುವಾರ, 7 ಜನವರಿ 2018 (07:31 IST)
ಮುಂಬೈ : ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಅವರು ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಮೈದಾನದ ಸಿಬ್ಬಂದಿಯೊಬ್ಬರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ತಮ್ಮ ಮನೆಗೆ ಭೋಜನಕ್ಕೆ ಆಹ್ವಾನಿಸಿದ್ದಾರೆ.

 
ತಮ್ಮ ಕ್ರಿಕೆಟ್ ಜೀವನದ ಯಶಸ್ವಿಗೆ ಪಿಸಿಎ ಮೈದಾನದ ಸಿಬ್ಬಂದಿಗಳೂ ಕಾರಣವೆಂದು ಅರಿತಿರುವ ಇವರು ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಮೈದಾನದ ಸಿಬ್ಬಂದಿ ಗ್ರೌಂಡ್ಸ್ ಮನ್ ಮುಲಾಯಂ ಸಿಂಗ್ ಅವರಿಗೆ ತಮ್ಮ ಮನೆಯಲ್ಲಿ ಭೋಜನದ ವ್ಯವಸ್ಥೆ ಮಾಡಿದ್ದಾರೆ.

 
ಇದರ ಬಗ್ಗೆ ಅವರು ಫೋಟೋ ವೊಂದನ್ನು ಟ್ವೀಟರ್ ನಲ್ಲಿ ಹಾಕಿದ್ದು ‘’ಮೊಹಾಲಿಯ ಪಿಸಿಎ ಕ್ರಿಕೆಟ್ ಕ್ರೀಡಾಂಗಣದ ಶ್ರಮಜೀವಿ ಹಾಗು ಕಳೆದ 22 ವರ್ಷಗಳಿಂದ ಸತತವಾಗಿ ಕಠಿಣ ಪರಿಶ್ರಮ ಪಡುತ್ತಿರುವ ಮುಲಾಯಂ ಸಿಂಗ್ ಅವರೊಂದಿಗೆ ರಾತ್ರಿಯ ಊಟ. ಮೈದಾನದಲ್ಲಿ ನಿಮ್ಮ ಎಲ್ಲಾ ರೀತಿಯ ಬೆಂಬಲಕ್ಕೆ ಧನ್ಯವಾದಗಳು” ಎಂದು ಬರೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟೀಂ ಇಂಡಿಯಾ ಕ್ರಿಕೆಟಿಗ ಪತ್ನಿಯರ ಗ್ಯಾಂಗ್ ಗೆ ಈಗ ಅನುಷ್ಕಾ ಶರ್ಮಾನೇ ನಾಯಕಿ! (ಫೋಟೋ ಗ್ಯಾಲರಿ)