Publish Date: Thu, 14 Dec 2017 (10:12 IST)
Updated Date: Thu, 14 Dec 2017 (10:17 IST)
ಮೊಹಾಲಿ: ಧೋನಿ ಮೈದಾನಕ್ಕೆ ಬಂದರೇ ಧೋನಿ..ಧೋನಿ ಎಂಬ ಕೂಗು ಮುಗಿಲು ಮುಟ್ಟುತ್ತದೆ. ಅಷ್ಟೊಂದು ಅಭಿಮಾನಿಗಳು ಕೂಲ್ ಕ್ಯಾಪ್ಟನ್ ಗಿದ್ದಾರೆ. ಅದರ ಪರಿಚಯ ಮತ್ತೊಮ್ಮೆ ಶ್ರೀಲಂಕಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಧೋನಿಗಾಗಿದೆ.
ಟೀಂ ಇಂಡಿಯಾ ಫೀಲ್ಡಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಕೀಪಿಂಗ್ ಮಾಡುತ್ತಿದ್ದ ಧೋನಿ ಕಾಲಿಗೆರಗಿ ಅಭಿಮಾನ ಮೆರೆದಿದ್ದಾನೆ. ಈತ ಕಾಲಿಗೆರಗಿದರೆ, ಧೋನಿ ಬೆನ್ನುತಟ್ಟಿ ಮೇಲೆತ್ತಿದರು.
ಅಷ್ಟರಲ್ಲಿ ಮೈದಾನಕ್ಕೆ ಧಾವಿಸಿ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ಎಳೆದು ಹೊರಗೆ ಕರೆದೊಯ್ದರು. ವಿಡಿಯೋ ಇಲ್ಲಿದೆ ನೋಡಿ..
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ