ನಿವೃತ್ತಿ ಬಗ್ಗೆ ಮಾತಾಡ್ತೀಯಾ? ಅಭಿಮಾನಿಯ ಬೆಂಡೆತ್ತಿದ ಹರ್ಭಜನ್ ಸಿಂಗ್!

ಶುಕ್ರವಾರ, 24 ನವೆಂಬರ್ 2017 (08:59 IST)
ನವದೆಹಲಿ: ಟ್ವಿಟರ್ ನಲ್ಲಿ ಸಕ್ರಿಯರಾಗಿರುವ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಗೆ ಅಭಿಮಾನಿಯೊಬ್ಬ ನಿವೃತ್ತಿ ಬಗ್ಗೆ ಕೇಳಿದ್ದಕ್ಕೆ ಭಜಿ ಕೆಂಡಾಮಂಡಲರಾಗಿದ್ದಾರೆ.
 

ಇದಕ್ಕೆಲ್ಲಾ ಕಾರಣವಾಗಿದ್ದು ಭಜಿ ಪ್ರಕಟಿಸಿದ್ದ ಒಂದು ಫೋಟೋ. ಟ್ವಿಟರ್ ನಲ್ಲಿ ‘ಬ್ಯಾಕ್ ಟು ದಿ ಬೇಸಿಕ್ಸ್’ ಎಂದು ಫೋಟೋ ಸಮೇತ ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಯೊಬ್ಬರು ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಗೌರವದಿಂದ ವಿದಾಯ ಹೇಳಿ. ಹಳೆಯ ಶ್ವಾನದಿಂದ ಹೊಸ ಟ್ರಿಕ್ಸ್ ಏನೂ ನಡೆಯದು. ನಿಮ್ಮ ಮುಗಿಯಿತು. ಮೊದಲು ನಿವೃತ್ತಿ ಹೇಳಿ ಎಂದು ಪ್ರತಿಕ್ರಿಯಿಸಿದ್ದ. ಇದಕ್ಕೆ ಸಿಟ್ಟಿಗೆದ್ದ ಭಜಿ ನಿನ್ನಂಥ ಮುದಿ ಶ್ವಾನದಿಂದ ಮಾತ್ರ ಇಂಥ ಸಲಹೆ ನಿರೀಕ್ಷಿಸಲು ಸಾಧ್ಯ. ಇನ್ನೂ ಈ ಕೆಲಸ ಮುಂದುವರಿಸು ಎಂದು ಖಾರವಾಗಿ ಬೆಂಡೆತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಿಚ್ ನೋಡಿಯೇ ಲಂಕಾ-ಟೀಂ ಇಂಡಿಯಾ ನಾಯಕರಿಗೆ ಮಂಡೆ ಬಿಸಿಯಾಯ್ತು!