Publish Date: Thu, 23 Nov 2017 (11:15 IST)
Updated Date: Thu, 23 Nov 2017 (11:17 IST)
ನವದೆಹಲಿ: ಟೀಂ ಇಂಡಿಯಾದಿಂದ ಕಡೆಗಣಿಸಲ್ಪಟ್ಟಿರುವ ಆಲ್ ರೌಂಡರ್ ಯುವರಾಜ್ ಸಿಂಗ್ ಮಾಡಿರುವ ಕೆಲಸಕ್ಕೆ ಬಿಸಿಸಿಐ ಸಖತ್ ಗರಂ ಆಗಿದೆ.
ಫಿಟ್ ನೆಸ್ ಇಲ್ಲ ಎನ್ನುವ ಕಾರಣಕ್ಕೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗುತ್ತಿಲ್ಲ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಿರುವ ಯುವರಾಜ್ ಸಿಂಗ್ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಬಂದು ಫಿಟ್ ನೆಸ್ ಸುಧಾರಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಆದರೆ ಇದಕ್ಕೆ ಏಕೆ ಬಿಸಿಸಿಐ ಗರಂ ಆಗಬೇಕು ಎಂದುಕೊಳ್ಳುತ್ತಿದ್ದೀರಾ? ಆದರೆ ಇದು ರಣಜಿ ಕ್ರಿಕೆಟ್ ನಡೆಯುವ ಸಮಯ. ಈ ಸಂದರ್ಭದಲ್ಲಿ ತವರು ತಂಡದ ಪರ ರಣಜಿ ಆಡುವುದು ಬಿಟ್ಟು ಎನ್ ಸಿಎ ಸೇರಿಕೊಂಡಿರುವುದಕ್ಕೆ ಬಿಸಿಸಿಐ ಅಧಿಕಾರಿಗಳು ಸಿಟ್ಟಿಗೆದ್ದಿದ್ದಾರೆ.
ಈ ವರ್ಷ ಐಪಿಎಲ್ ಹರಾಜು ಪ್ರಕ್ರಿಯೊಳಗೆ ಬರಲಿರುವ ಯುವರಾಜ್ ಸಿಂಗ್ ಗೆ ಉತ್ತಮ ಬೆಲೆ ಬಿಕರಿಯಾಗಬೇಕೆಂದರೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿ ಐಪಿಎಲ್ ಮಾಲಿಕರ ಗಮನ ಸೆಳೆಯಲೇಬೇಕು. ಇದಕ್ಕಾಗಿ ಕಸರತ್ತು ನಡೆಸುತ್ತಿರುವ ಯುವರಾಜ್ ಸಿಂಗ್ ರಣಜಿ ಪಂದ್ಯವನ್ನು ನಿರ್ಲಕ್ಷಿಸಿರುವುದು ಬಿಸಿಸಿಐ ದೊರೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ