Select Your Language

Notifications

webdunia
webdunia
webdunia
webdunia

ವೈಯಕ್ತಿಕ ದಾಖಲೆ ತ್ಯಾಗ ಮಾಡಲು ಮುಂದಾಗಿದ್ದ ವಿರಾಟ್ ಕೊಹ್ಲಿ!

ವೈಯಕ್ತಿಕ ದಾಖಲೆ ತ್ಯಾಗ ಮಾಡಲು ಮುಂದಾಗಿದ್ದ ವಿರಾಟ್ ಕೊಹ್ಲಿ!
ಕೋಲ್ಕೊತ್ತಾ , ಬುಧವಾರ, 22 ನವೆಂಬರ್ 2017 (08:24 IST)
ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಿದ್ದ ವಿರಾಟ್ ಕೊಹ್ಲಿ ದಾಖಲೆಯ ಶತಕವನ್ನೂ ತಂಡದ ಹಿತದೃಷ್ಟಿಯಿಂದ ತ್ಯಾಗ ಮಾಡಲು ಮುಂದಾಗಿದ್ದರಂತೆ!
 

ಮೊದಲ ಟೆಸ್ಟ್ ಪಂದ್ಯದಲ್ಲಿ 97 ರನ್ ಗಳಿಸಿದ್ದಾಗ ಕೊಹ್ಲಿ ಡ್ರೆಸ್ಸಿಂಗ್ ರೂಂ ಕಡೆ ಸನ್ನೆ ಮಾಡಿ ಕೋಚ್ ರವಿ ಶಾಸ್ತ್ರಿ ಬಳಿ ಡಿಕ್ಲೇರ್ ಮಾಡಬಹುದೇ ಎಂದು ಕೇಳಿದ್ದರು. ಆದರೆ ಶಾಸ್ತ್ರಿ, ಇನ್ನೂ ಎರಡು ಓವರ್ ಮುಂದುವರಿಸು. ನಿನ್ನ ಶತಕ ಪೂರ್ತಿಯಾಗಲಿ ಎಂದು 12 ನೇ ಆಟಗಾರನ ಮೂಲಕ ಸಂದೇಶ ಕಳುಹಿಸಿದರು.

ಹೀಗಾಗಿ ನಂತರ ಕೊಹ್ಲಿ ಸಿಕ್ಸರ್ ಸಿಡಿಸುವ ಮೂಲಕ ಶತಕ ಪೂರೈಸಿದರು. ಆದರೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಲಂಕಾಗೆ ಬ್ಯಾಟಿಂಗ್ ಅವಕಾಶ ಕೊಟ್ಟರೆ, ದ್ವಿತೀಯ ಇನಿಂಗ್ಸ್ ನಲ್ಲಿ ಅವರನ್ನು ಬೇಗ ಔಟ್ ಮಾಡಲು ಅವಕಾಶವಾಗುತ್ತದೆಂಬ ಕಾರಣಕ್ಕೆ ಕೊಹ್ಲಿ ತಮ್ಮ ದಾಖಲೆಯ ಶತಕವನ್ನೂ ತ್ಯಾಗ ಮಾಡಲು ಸಿದ್ಧರಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹರ್ಭಜನ್ ಸಿಂಗ್ ಮಗಳ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡ ಗಂಗೂಲಿ!