Select Your Language

Notifications

webdunia
webdunia
webdunia
webdunia

ನಾಯಕ ಕೊಹ್ಲಿಗೆ ಒಲಿಯಿತು ಎರಡು ದಾಖಲೆಗಳು

ನಾಯಕ ಕೊಹ್ಲಿಗೆ ಒಲಿಯಿತು ಎರಡು ದಾಖಲೆಗಳು
ಕೋಲ್ಕೊತ್ತಾ , ಮಂಗಳವಾರ, 21 ನವೆಂಬರ್ 2017 (08:33 IST)
ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಏಕಾಂಗಿಯಾಗಿ ಹೋರಾಡಿ ಶತಕ ದಾಖಲಿಸಿದ ನಾಯಕ ಕೊಹ್ಲಿ ಎರಡು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ.
 

ಅತೀ ಕಡಿಮೆ ಪಂದ್ಯಗಳಿಂದ 50 ಪ್ಲಸ್ ಶತಕ ದಾಖಲಿಸಿದ ದ. ಆಫ್ರಿಕಾದ ಹಶೀಮ್ ಆಮ್ಲಾ ದಾಖಲೆಯನ್ನು ಕೊಹ್ಲಿ ಮುರಿದರು. ಅಲ್ಲದೆ, 50 ಪ್ಲಸ್ ಅಂತಾರಾಷ್ಟ್ರೀಯ ಶತಕಗಳ ದಾಖಲೆ ಮಾಡಿದ ವಿಶ್ವದ 7 ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ಸಚಿನ್ ತೆಂಡುಲ್ಕರ್ ಈ ಪಟ್ಟಿಯಲ್ಲಿ 100 ಶತಕಗಳ ಶತಕದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ಅಷ್ಟೇ ಅಲ್ಲದೆ, ಅತೀ ಹೆಚ್ಚು ಟೆಸ್ಟ್ ಶತಕ ಬಾರಿಸಿದ ಭಾರತೀಯ ನಾಯಕ ಎನ್ನುವ ದಾಖಲೆಯನ್ನೂ ಕೊಹ್ಲಿ ಮಾಡಿದರು. 11 ಶತಕಗಳೊಂದಿಗೆ ಕೊಹ್ಲಿ ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ಸರಿಸಮನಾಗಿ ನಿಂತರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಒಂದೆಡೆ ವಿಕೆಟ್ ಉರುಳಿತ್ತಿದ್ದರೆ, ಇನ್ನೊಂದೆಡೆ ಕೊಹ್ಲಿ ಮಾಡಿದ್ದೇನು ಗೊತ್ತೇ?!