Publish Date: Tue, 21 Nov 2017 (08:27 IST)
Updated Date: Tue, 21 Nov 2017 (08:31 IST)
ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನ ದ್ವಿತೀಯ ಇನಿಂಗ್ಸ್ ನಲ್ಲಿ ಒಂದೆಡೆ ಕೊಹ್ಲಿ ಬಂಡೆಯಂತೆ ನಿಂತು ಆಡುತ್ತಿದ್ದರೆ, ಇನ್ನೊಂದೆಡೆ ನಿಯಮಿತವಾಗಿ ವಿಕೆಟ್ ಬೀಳುತ್ತಿತ್ತು. ಈ ಹಂತದಲ್ಲೂ ಕೊಹ್ಲಿ ಮಾಡಿದ್ದೇನು ಗೊತ್ತೇ?
ಸಾಮಾನ್ಯವಾಗಿ ಇಂತಹ ಒತ್ತಡದ ಸನ್ನಿವೇಶಗಳಲ್ಲಿ ಕೊಹ್ಲಿ ಬೇಗನೇ ತಾಳ್ಮೆ ಕಳೆದುಕೊಳ್ಳುತ್ತಾರೆ. ಆದರೆ ನಿನ್ನೆ ಮಾತ್ರ ಅವರು ಹಾಗೆ ಮಾಡಲಿಲ್ಲ. ವೃದ್ಧಿಮಾನ್ ಸಹಾ ವಿಕೆಟ್ ಕಳೆದುಕೊಂಡ ಮೇಲೆ ಭಾರತದ ಬಳಿ ಬಾಲಂಗೋಚಿ ವಿಕೆಟ್ ಗಳಷ್ಟೇ ಇತ್ತು.
ಈ ಹಂತದಲ್ಲೂ ನಾನು ಒತ್ತಡವನ್ನು ಮೈಮೇಲೆ ಎಳೆದುಕೊಳ್ಳಲಿಲ್ಲ. ಭುವನೇಶ್ವರ್ ಕುಮಾರ್, ಶಮಿ ಜತೆಗೆ ತಮಾಷೆ ಮಾಡುತ್ತಾ ಬ್ಯಾಟಿಂಗ್ ಮಾಡಿದೆ. ಹೀಗಾಗಿ ಕೊಂಚವೂ ಒತ್ತಡದ ಅನುಭವವಾಗಲಿಲ್ಲ ಎಂದು ಭಾರತೀಯ ನಾಯಕ ಪಂದ್ಯದ ನಂತರ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ