Publish Date: Mon, 20 Nov 2017 (11:40 IST)
Updated Date: Mon, 20 Nov 2017 (11:46 IST)
ಕೋಲ್ಕೊತ್ತಾ: ಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನ ಟೀಂ ಇಂಡಿಯಾ ಪಂದ್ಯ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಕಮ್ ಬ್ಯಾಕ್ ಹಾದಿಯಲ್ಲಿದ್ದ ಟೀಂ ಇಂಡಿಯಾಕ್ಕೆ ಮತ್ತೆ ಸುರಂಗಾ ಲಕ್ಮಲ್ ಏಟು ಕೊಟ್ಟಿದ್ದಾರೆ.
ಮೊದಲ ಇನಿಂಗ್ಸ್ ನಲ್ಲಿ ಭಾರತಕ್ಕೆ ಭಾರೀ ಆಘಾತ ನೀಡಿದ್ದ ಲಕ್ಮಲ್ ಮತ್ತೆ ದ್ವಿತೀಯ ಇನಿಂಗ್ಸ್ ನಲ್ಲಿ ಚೇತರಿಕೆಯ ಹಾದಿಯಲ್ಲಿದ್ದ ತಂಡಕ್ಕೆ ಆಘಾತ ನೀಡಿದ್ದಾರೆ. ಇದರ ಹೊರತಾಗಿಯೂ ನಾಯಕ ಕೊಹ್ಲಿ ಕ್ರೀಸ್ ನಲ್ಲಿದ್ದು, ಊಟದ ವಿರಾಮದ ವೇಳೆಗೆ ತಂಡ 5 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದೆ.
ವಿರಾಟ್ ಕೊಹ್ಲಿ 41 ರನ್ ಗಳಿಸಿದ್ದು, ಅವರಿಗೆ ರವಿಚಂದ್ರನ್ ಅಶ್ವಿನ್ ಇನ್ನೂ ಖಾತೆ ತೆರೆಯಬೇಕಿದೆ. ನಿನ್ನೆ 74 ರನ್ ಗೆ ದಿನದಾಟ ಮುಗಿಸಿದ್ದ ಕೆಎಲ್ ರಾಹುಲ್ ಇಂದು ಐದು ಸೇರಿಸಿ ಔಟಾದರು. ಮಿಸ್ಟರ್ ಡಿಪೆಂಡೇಬಲ್ ಚೇತೇಶ್ವರ ಪೂಜಾರ 22 ರನ್ ಗಳಿಸಿ ಲಕ್ಮಲ್ ಬಲೆಗೆ ಬಿದ್ದರು. ಅಜಿಂಕ್ಯಾ ರೆಹಾನೆ ಕೂಡಾ ಶೂನ್ಯಕ್ಕೆ ಲಕ್ಮಲ್ ಶಿಖಾರಿಯಾದರು. ಈ ಎರಡು ತ್ವರಿತ ವಿಕೆಟ್ ಗಳು ಟೀಂ ಇಂಡಿಯಾಕ್ಕೆ ಆಘಾತ ನೀಡಿದವು.
ಇದೀಗ ಟೀಂ ಇಂಡಿಯಾ 129 ರನ್ ಗಳ ಮುನ್ನಡೆ ಪಡೆದಿದೆ. ಚಹಾ ವಿರಾಮದವರೆಗೆ ಆಡಲು ಸಾಧ್ಯವಾದರೆ ಪಂದ್ಯ ಡ್ರಾ ಮಾಡಿಕೊಳ್ಳಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ