ಕಾನ್ಪುರ: ಉತ್ತರ ಪ್ರದೇಶ ಮತ್ತು ಕರ್ನಾಟಕ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ ನೀರಸ ಡ್ರಾನತ್ತ ಸಾಗುತ್ತಿದೆ. ಉತ್ತರ ಪ್ರದೇಶವನ್ನು 331 ರನ್ ಗಳಿ ಆಲೌಟ್ ಮಾಡಿದ ಕರ್ನಾಟಕ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.
ಮೊದಲ ಇನಿಂಗ್ಸ್ ನಲ್ಲಿ ಕರ್ನಾಟಕ 655 ರನ್ ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಉತ್ತರ ಪ್ರದೇಶ 331 ರನ್ ಗಳಿ ಆಲೌಟ್ ಆಗಿದೆ. ಕರ್ನಾಟಕದ ಪರ ರೋನಿತ್ ಮೋರೆ 2, ಶ್ರೇಯಸ್ ಗೋಪಾಲ್ 3 ಮತ್ತು ಕೆ ಗೌತಮ್ 2 ವಿಕೆಟ್ ಕಬಳಿಸಿದರು.
ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ವೇಗವಾಗಿ ರನ್ ಗಳಿಸುತ್ತಿದ್ದು ಇತ್ತೀಚೆಗಿನ ವರದಿ ಬಂದಾಗ 5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 30 ರನ್ ಗಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!