Publish Date: Sat, 18 Nov 2017 (16:28 IST)
Updated Date: Sat, 18 Nov 2017 (16:38 IST)
ಕಾನ್ಪುರ: ಉತ್ತರ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಪರ ಮನೀಶ್ ಪಾಂಡೆ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಆದರೆ ದೇಗಾ ನಿಶ್ಚಲ್ ಕೂದಲೆಳೆಯಲ್ಲಿ ದ್ವಿಶತಕ ವಂಚಿತರಾಗಿದ್ದಾರೆ.
ನಿನ್ನೆ 327 ಕ್ಕೆ 4 ವಿಕೆಟ್ ಕಳೆದುಕೊಂಡು ದಿನದಾಟ ಮುಕ್ತಾಯಗೊಳಿಸಿದ್ದ ಕರ್ನಾಟಕಕ್ಕೆ ಇಂದು ಮನೀಶ್ ಮತ್ತು ನಿಶ್ಚಲ್ ಭರ್ಜರಿ ತಳಪಾಯ ಹಾಕಿಕೊಟ್ಟರು. ಇವರಿಬ್ಬರ ಭರ್ಜರಿ ಜತೆಯಾಟದ ನೆರವಿನಿಂದ ಕರ್ನಾಟಕ ದಿನದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 642 ರನ್ ಗಳಿಸಿತ್ತು.
ದಿನದಂತ್ಯಕ್ಕೆ ನಾಯಕ ವಿನಯ್ ಕುಮಾರ್ (1) ಮತ್ತು ಸಿಎಂ ಗೌತಮ್ (4) ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಇನ್ನೆರಡು ದಿನದ ಪಂದ್ಯ ಬಾಕಿಯಿದ್ದು, ಕರ್ನಾಟಕ ಬೌಲರ್ ಗಳು ಎದುರಾಳಿಯನ್ನು ಎಷ್ಟು ಬೇಗ ಕಟ್ಟಿ ಹಾಕುತ್ತಾರೆ ಎನ್ನುವುದರ ಮೇಲೆ ಫಲಿತಾಂಶ ನಿಂತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ