Publish Date: Wed, 15 Nov 2017 (11:05 IST)
Updated Date: Wed, 15 Nov 2017 (11:10 IST)
ಬೆಂಗಳೂರು: ಮೂರು ಪಂದ್ಯ ಗೆದ್ದು, ನಾಲ್ಕನೇ ಪಂದ್ಯವನ್ನು ಡ್ರಾ ಮಾಡಿಕೊಂಡು ಬೀಗುತ್ತಿರುವ ಕರ್ನಾಟಕ ತಂಡಕ್ಕೆ ಮುಂದಿನ ರಣಜಿ ತಂಡದಲ್ಲಿ ಪ್ರಮುಖ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಸೇವೆ ಅಲಭ್ಯವಾಗಲಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವುದರಿಂದ ಕೆಎಲ್ ರಾಹುಲ್ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಉತ್ತರ ಪ್ರದೇಶ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ರಾಹುಲ್ ಆಡುತ್ತಿಲ್ಲ.
ಉತ್ತರ ಪ್ರದೇಶ ತಂಡಕ್ಕೆ ರಾಜ್ಯ ತಂಡವನ್ನು ಪ್ರಕಟಿಸಲಾಗಿದ್ದು, ವಿನಯ್ ಕುಮಾರ್ ನೇತೃತ್ವದ ತಂಡದಲ್ಲಿ ಮನೀಶ್ ಪಾಂಡೆ ಮುಂದುವರಿಯಲಿದ್ದಾರೆ. ಅವರ ಹೊರತಾಗಿ ಉಳಿದೆಲ್ಲಾ ಆಟಗಾರರೂ ತಂಡಕ್ಕೆ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ