Publish Date: Wed, 15 Nov 2017 (09:23 IST)
Updated Date: Wed, 15 Nov 2017 (09:25 IST)
ರಾಂಚಿ: ಸದ್ಯಕ್ಕೆ ಟೀಂ ಇಂಡಿಯಾ ಟೆಸ್ಟ್ ಸರಣಿ ಆಡಲಿರುವುದರಿಂದ ಸೀಮಿತ ಓವರ್ ಗಳ ವಿಕೆಟ್ ಕೀಪರ್ ಧೋನಿಗೆ ಬಿಡುವು ಸಿಕ್ಕಿದೆ. ಈ ರಜೆಯ ಮಜಾವನ್ನು ಅವರು ಚೆನ್ನಾಗಿಯೇ ಸದುಪಯೋಗಪಡಿಸಿಕೊಂಡಿದ್ದಾರೆ.
ತಮ್ಮ ಫಾರ್ಮ್ ಹೌಸ್ ನಲ್ಲಿ ತಮ್ಮ ನೆಚ್ಚಿನ ನಾಯಿಗಳ ಜತೆ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ ಧೋನಿ. ಮೊದಲೇ ಧೋನಿಗೆ ಶ್ವಾನಗಳೆಂದರೆ ಪ್ರೀತಿ ಜಾಸ್ತಿ. ತಾವೇ ಉತ್ತಮ ತಳಿಯ ಶ್ವಾನಗಳನ್ನು ಸಾಕುತ್ತಿದ್ದಾರೆ.
ಇದೀಗ ತಮ್ಮ ಫಾರ್ಮ್ ಹೌಸ್ ನಲ್ಲಿ ಡಚ್ ಶೆಫರ್ಡ್ ನಾಯಿಗೆ ತರಬೇತಿ ನೀಡುತ್ತಿರುವ ವಿಡಿಯೋ ಒಂದನ್ನು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಹಾಕಿದ್ದಾರೆ. ಝೋಯಾ ಎಂಬ ಹೆಸರಿನ ಈ ನಾಯಿಗೆ ರಿಂಗ್ ಮೂಲಕ ಹಾರಿ ಬರುವುದನ್ನು ಧೋನಿ ತರಬೇತು ನೀಡುತ್ತಿದ್ದಾರೆ. ಅದರ ಹಿಂದೆ ಧೋನಿ ಸಾಕುವ ಇನ್ನೊಂದು ನಾಯಿಯೂ ಓಡೋಡಿ ಬರುವ ಮುದ್ದಾದ ದೃಶ್ಯ ಈ ವಿಡಿಯೋದಲ್ಲಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ