Publish Date: Tue, 14 Nov 2017 (08:55 IST)
Updated Date: Tue, 14 Nov 2017 (08:59 IST)
ಮುಂಬೈ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಸರಣಿ ಸ್ವೀಪ್ ಮಾಡಿದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೊಸದೊಂದು ದಾಖಲೆ ಮಾಡಲು ಅವಕಾಶವಿದೆ.
ಮಾಜಿ ನಾಯಕ ಸೌರವ್ ಗಂಗೂಲಿಯವರ ದಾಖಲೆ ಮುರಿಯಲು ಕೊಹ್ಲಿ ಇನ್ನು ಮೂರು ಪಂದ್ಯ ಗೆದ್ದರೆ ಸಾಕು. ಇದರೊಂದಿಗೆ ಕೊಹ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ನಾಯಕರ ಸಾಲಿನಲ್ಲಿ ಗಂಗೂಲಿಯನ್ನು ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರಲಿದ್ದಾರೆ.
ಮೊದಲ ಸ್ಥಾನದಲ್ಲಿ ಧೋ ಇದ್ದಾರೆ. ಧೋನಿ 60 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ 27 ಗೆಲುವು ಕೊಡಿಸಿದ್ದಾರೆ. ಗಂಗೂಲಿ ಖಾತೆಯಲ್ಲಿ 21 ಗೆಲುವುಗಳಿವೆ. ಕೊಹ್ಲಿ ಇದೀಗ 19 ಗೆಲುವು ಕಂಡಿದ್ದು, ಇನ್ನು ಮೂರು ಪಂದ್ಯಗಳಲ್ಲಿ ಗೆದ್ದರೆ ದ್ವಿತೀಯ ಸ್ಥಾನಿಯಾಗಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ