Publish Date: Tue, 14 Nov 2017 (08:23 IST)
Updated Date: Tue, 14 Nov 2017 (08:25 IST)
ನವದೆಹಲಿ: ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ನೇಪಾಳ ಕ್ರಿಕೆಟ್ ತಂಡ ಹೊಗಳಿಕೆಯ ಸುರಿಮಳೆಗೈದಿದೆ. ಅಂಡರ್ 19 ಏಷ್ಯಾ ಕಪ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ನೇಪಾಳ ದ್ರಾವಿಡ್ ವರ್ತನೆಗೆ ದಿಲ್ ಖುಷ್ ಆಗಿದೆ.
ಇದೇ ಮೊದಲ ಬಾರಿಗೆ ನೇಪಾಳ ತಂಡ ಭಾರತ ತಂಡವನ್ನು ಸೋಲಿಸಿದೆ. ಇದೇ ಖುಷಿಯಲ್ಲಿದ್ದ ನೇಪಾಳ ತಂಡಕ್ಕೆ ದ್ರಾವಿಡ್ ಇನ್ನಷ್ಟು ಖುಷಿ ನೀಡಿದ್ದಾರೆ.
ತಮ್ಮ ತಂಡವನ್ನು ಸೋಲಿಸಿದ ಎದುರಾಳಿ ತಂಡದ ಕೋಚ್ ಬಳಿ ತೆರಳಿದ ದ್ರಾವಿಡ್, ನೀವು ಚೆನ್ನಾಗಿ ಆಡಿದಿರಿ. ಈ ಗೆಲುವಿಗೆ ನೀವು ಅರ್ಹರಾಗಿದ್ದಿರಿ ಎಂದು ಅಭಿನಂದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನೇಪಾಳ ಕ್ರಿಕೆಟ್ ತಂಡದ ಕೋಚ್ ದ್ರಾವಿಡ್ ರಂತಹ ಮಹಾನ್ ಆಟಗಾರರ ಸ್ಪೂರ್ತಿ ನಮಗೆ ಖುಷಿ ತಂದಿದೆ ಎಂದಿದ್ದಾರೆ. ನೇಪಾಳ ಈ ಪಂದ್ಯದಲ್ಲಿ ಭಾರತವನ್ನು 19 ರನ್ ಗಳಿಂದ ಸೋಲಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ