Publish Date: Tue, 14 Nov 2017 (08:19 IST)
Updated Date: Tue, 14 Nov 2017 (08:21 IST)
ನವದೆಹಲಿ: ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಶ್ರೀಲಂಕಾ ತಂಡದ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿ ನಂತರ ವಿವಾದವಾಗುವ ಲಕ್ಷಣ ತೋರುತ್ತಿದ್ದಂತೆ ಅಳಿಸಿ ಹಾಕಿದ್ದಾರೆ.
ಶ್ರೀಲಂಕಾ ಮತ್ತು ಭಾರತ ನಡುವೆ ನ.16 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಲಂಕಾ ಬ್ಯಾಟ್ಸ್ ಮನ್ ದಿಮುತು ಕರುಣರತ್ನೆ ಭಾರತದ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಜೋಡಿಯನ್ನು ಸೂಕ್ತ ರಣತಂತ್ರದೊಂದಿಗೆ ಎದುರಿಸಿದರೆ ರನ್ ಗಳಿಸಲು ಕಷ್ಟವಾಗದು ಎಂದಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಭಜಿ, ಜಿಂಬಾಬ್ವೆ ಸರಣಿಯಲ್ಲಿ ಇತ್ತೀಚೆಗೆ ಹೀಗೇ ಮಾಡಿ ಇವರು ಸೋತಿದ್ದರು. ಮೊದಲ ಇನಿಂಗ್ಸ್ ನಲ್ಲಿ 200, ದ್ವಿತೀಯ ಇನಿಂಗ್ಸ್ ನಲ್ಲಿ 150 ರನ್ ಗಳಿಸಿದ್ದರು. ಅವರನ್ನು ಇಷ್ಟು ಕೆಳ ಮಟ್ಟದಲ್ಲಿ ನೋಡಲು ಬೇಸರವಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಅವರು ಶೀಘ್ರದಲ್ಲೇ ಉನ್ನತಿ ಪಡೆಯಬಹುದು ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ಆದರೆ ಇದು ವಿವಾದವಾಗುತ್ತಿದ್ದಂತೆ ಟ್ವೀಟ್ ಅಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ