ಮುಂಬೈ: ಯೋ ಯೋ ಫಿಟ್ನೆಸ್ ಟೆಸ್ಟ್ ಭರಾಟೆಯಲ್ಲಿ ಟೀಂ ಇಂಡಿಯಾದಲ್ಲಿ ಯುವರಾಜ್ ಸಿಂಗ್, ಸುರೇಶ್ ರೈನಾರಂತಹ ಹಿರಿಯ ಆಟಗಾರರು ಸ್ಥಾನ ಕಳೆದುಕೊಂಡಿದ್ದಾರೆ. ಇದೀಗ ಹೊಸ ಫಿಟ್ನೆಸ್ ಟೆಸ್ಟ್ ನ್ನು ಭಾರತೀಯ ಕ್ರಿಕೆಟಿಗರಿಗೆ ನೀಡಲಾಗುತ್ತಿದೆ.
ಇದಕ್ಕಾಗಿ ಬಿಸಿಸಿಐ ಒಬ್ಬ ಆಟಗಾರನಿಗೆ 25 ರಿಂದ 30 ಸಾವಿರ ರೂ.ಗಳನ್ನು ವ್ಯಯಿಸಲಿದೆ. ಇದರ ಹೆಸರು ಡಿಎನ್ ಎ ಟೆಸ್ಟ್. ಇದರಲ್ಲಿ ಆಟಗಾರನ ಸಂಪೂರ್ಣ ದೇಹರಚನೆ ತಿಳಿಯಲಿದೆ.
ಈಗಾಗಲೇ ಈ ಟೆಸ್ಟ್ ನ್ನು ಆಟಗಾರರಿಗೆ ಪರಿಚಯಿಸಲಾಗಿದೆ. ಟೀಂ ಇಂಡಿಯಾ ಫಿಟ್ನೆಸ್ ಗುರು ಶಂಕರ್ ಬಸು ಈ ಹೊಸ ಫಿಟ್ನೆಸ್ ಟೆಸ್ಟ್ ಪರಿಚಯಿಸಲು ಶಿಫಾರಸ್ಸು ಮಾಡಿದವರು. ಅದರಂತೆ ಈಗಾಗಲೇ ವಿಶ್ವದಲ್ಲೇ ಅತ್ಯುನ್ನತ ಫಿಟ್ ಪ್ಲೇಯರ್ ಗಳನ್ನು ಹೊಂದಿರುವ ಟೀಂ ಇಂಡಿಯಾ ಆಟಗಾರರ ಫಿಟ್ನೆಸ್ ಗುಣಮಟ್ಟ ಇನ್ನಷ್ಟು ಹೆಚ್ಚಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!