Publish Date: Wed, 25 Oct 2017 (09:45 IST)
Updated Date: Wed, 25 Oct 2017 (10:10 IST)
ಮುಂಬೈ: ವಿರಾಟ್ ಕೊಹ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ಲಂಕಾ ಸರಣಿಯಿಂದ ವಿಶ್ರಾಂತಿ ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರೂ ಅದು ಪುರಸ್ಕೃತಗೊಂಡಿಲ್ಲ ಎನ್ನುವ ವರದಿಗಳನ್ನು ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಅಲ್ಲಗಳೆದಿದ್ದಾರೆ.
ಎಲ್ಲರಿಗೂ ವಿಶ್ರಾಂತಿ ಬೇಕು. ರೊಟೇಷನ್ ಪದ್ಧತಿಯಿದ್ದರೆ ಎಲ್ಲರಿಗೂ ಒಳ್ಳೆಯದು. ಸತತ ಕ್ರಿಕೆಟ್ ನಿಂದ ಬಳಲಿದ್ದಾಗ ಕೊಂಚ ವಿಶ್ರಾಂತಿ ನೀಡಬೇಕು. ಬಹುಶಃ ಕೊಹ್ಲಿಗೂ ವಿಶ್ರಾಂತಿ ಬೇಕು. ಅವರಿಗೆ ಯಾವಾಗ ಬೇಕೆನಿಸುತ್ತದೆ ಎಂದು ತಂಡದ ಮ್ಯಾನೇಜ್ ಮೆಂಟ್ ತೀರ್ಮಾನಿಸುತ್ತದೆ. ಅದರಲ್ಲಿ ವಿವಾದವಾಗುವಂತದ್ದು ಏನಿದೆ?’ ಎಂದು ದ್ರಾವಿಡ್ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬ್ಯಾಟ್ ನ ಗಾತ್ರ ಕಿರಿದುಗೊಳಿಸುವ ಐಸಿಸಿ ನಿರ್ಧಾರವನ್ನೂ ದ್ರಾವಿಡ್ ಸ್ವಾಗತಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ