Select Your Language

Notifications

webdunia
webdunia
webdunia
webdunia

ಅಪರೂಪಕ್ಕೆ ಒತ್ತಡಕ್ಕೆ ಸಿಲುಕಿದ ಟೀಂ ಇಂಡಿಯಾ

ಅಪರೂಪಕ್ಕೆ ಒತ್ತಡಕ್ಕೆ ಸಿಲುಕಿದ ಟೀಂ ಇಂಡಿಯಾ
ಪುಣೆ , ಬುಧವಾರ, 25 ಅಕ್ಟೋಬರ್ 2017 (09:26 IST)
ಪುಣೆ: ಇತ್ತೀಚೆಗಿನ ದಿನಗಳಲ್ಲಿ ಸೋಲೇ ಗೊತ್ತಿರದವರಂತೆ ಮೆರೆಯುತ್ತಿದ್ದ ಟೀಂ ಇಂಡಿಯಾ ಆಟಗಾರರಿಗೆ ಮೊದಲ ಪಂದ್ಯದಲ್ಲೇ ಶಾಕ್ ನೀಡಿದ ನ್ಯೂಜಿಲೆಂಡ್ ಪಡೆ ಇದೀಗ ಗೆಲುವಿನ ಒತ್ತಡಕ್ಕೆ ನೂಕಿದೆ.

 
ಇಂದು ಕೀವೀಸ್ ವಿರುದ್ಧ ಟೀಂ ಇಂಡಿಯಾ ಪುಣೆಯಲ್ಲಿ ದ್ವಿತೀಯ ಏಕದಿನ ಪಂದ್ಯವಾಡುತ್ತಿದೆ. ಕಳೆದ ಪಂದ್ಯದಲ್ಲಿ ಭಾರತೀಯರು ಎಲ್ಲಾ ವಿಭಾಗದಲ್ಲಿ ವಿಫಲರಾಗಿ ಸೋಲನುಭವಿಸಿದ್ದರು. ಈ ಪಂದ್ಯವನ್ನು ಗೆಲ್ಲದಿದ್ದರೆ, ಮೂರು ಪಂದ್ಯಗಳ ಸರಣಿ ಕೈ ತಪ್ಪುವುದು. ಅಷ್ಟೇ ಅಲ್ಲ, ಎಷ್ಟೋ ದಿನಗಳ ನಂತರ ಸರಣಿ ಸೋಲು ಎದುರಿಸಬೇಕಾಗಬಹುದು.

ಕಳೆದ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ಆಡಿರಲಿಲ್ಲ. ಈ ಪಂದ್ಯದಲ್ಲಿ ಅವರಿಗೆ ಸ್ಥಾನ ಲಭ್ಯವಾಗುವ ನಿರೀಕ್ಷೆಯಿದೆ. ಕಳೆದ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ದೊರಕಿರಲಿಲ್ಲ. ಇದು ಕೂಡಾ ಬ್ಯಾಟಿಂಗ್ ಮತ್ತು ಸ್ಪಿನ್ನರ್ ಗಳಿಗೆ ನೆರವಾಗುವ ಪಿಚ್ ಆಗಿರುವುದರಿಂದ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಸ್ಪಿನ್ನರ್ ಗಳೂ ಲಯ ಕಂಡುಕೊಳ್ಳಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಮರಳಲು ಇನ್ನೊಂದೇ ಹೆಜ್ಜೆ