Publish Date: Tue, 24 Oct 2017 (10:45 IST)
Updated Date: Tue, 24 Oct 2017 (10:49 IST)
ಮುಂಬೈ: ಡಿಸೆಂಬರ್ ನಲ್ಲಿ ವೈಯಕ್ತಿಕ ಕಾರಣಗಳಿಗಾಗಿ ಕ್ರಿಕೆಟ್ ಆಡಲು ಆಗುತ್ತಿಲ್ಲ. ಬಿಡುವು ಕೊಡಿ ಎಂದು ವಿರಾಟ್ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿದ ಬೆನ್ನಲ್ಲೇ ಹಲವು ಊಹಾಪೋಹಗಳು ಎದ್ದಿದೆ.
ಮತ್ತೊಮ್ಮೆ ವಿರಾಟ್-ಅನುಷ್ಕಾ ಮದುವೆ ಸುದ್ದಿ ಗರಿಗೆದರಿದೆ. ಕಳೆದ ವರ್ಷವೂ ಇವರಿಬ್ಬರು ಡಿಸೆಂಬರ್ ಅಂತ್ಯಕ್ಕೆ ಮದುವೆಯಾಗುತ್ತಾರೆ ಎಂದು ಭಾರೀ ಸುದ್ದಿಯಾಗಿತ್ತು. ಆದರೆ ಇಬ್ಬರೂ ಉತ್ತರಾಖಂಡ್ ನಲ್ಲಿ ನ್ಯೂ ಇಯರ್ ಸೆಲಬ್ರೇಷನ್ ಮಾಡಿ ಮದುವೆ ಸುದ್ದಿ ಏನೂ ಇಲ್ಲ ಎಂದು ಖಡಕ್ ಆಗಿ ಹೇಳಿದ್ದರು.
ಆದರೆ ಈ ಬಾರಿ ಕೊಹ್ಲಿ ಕ್ರಿಕೆಟ್ ನಿಂದ ಒಂದು ತಿಂಗಳು ಬಿಡುವು ಮಾಡಿಕೊಂಡಿರುವುದು ಮದುವೆ ಸುದ್ದಿಗೆ ರೆಕ್ಕೆ ಪುಕ್ಕ ಹುಟ್ಟಿಕೊಂಡಿದೆ. ಕೆಲವು ಮೂಲಗಳ ಪ್ರಕಾರ ವಿರಾಟ್ ಡಿಸೆಂಬರ್ ನಲ್ಲಿ ಅನುಷ್ಕಾ ಕೈ ಹಿಡಿಯಲಿದ್ದಾರೆ. ಇದೇ ಕಾರಣಕ್ಕೆ ಬ್ರೇಕ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸ್ವತಃ ಕೊಹ್ಲಿ ಸ್ಪಷ್ಟನೆ ಕೊಡುವವರೆಗೂ ಅಭಿಮಾನಿಗಳ ಕುತೂಹಲ ತಣ್ಣಗಾಗಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ