Publish Date: Tue, 24 Oct 2017 (08:39 IST)
Updated Date: Tue, 24 Oct 2017 (08:42 IST)
ಚೆನ್ನೈ: ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ಮಾಜಿ ಕೋಚ್ ಅನಿಲ್ ಕುಂಬ್ಳೆ ಗುಣಗಾನ ಮಾಡಿದ್ದಾರೆ. ನಾನು ಅವರ ಅತೀ ದೊಡ್ಡ ಅಭಿಮಾನಿ ಎಂದಿದ್ದಾರೆ.
ಶ್ರೀಲಂಕಾ ಸರಣಿಗೆ ಮೊದಲು ಅಶ್ವಿನ್, ಕುಂಬ್ಳೆ ಮೇಲೆ ತಮಗಿರುವ ಅಭಿಮಾನ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ತಮ್ಮ ಅಭಿಮಾನ ಹೇಳಿಕೊಂಡಿದ್ದಾರೆ.
ನಾನು ಅನಿಲ್ ಕುಂಬ್ಳೆಯವರ ದೊಡ್ಡ ಅಭಿಮಾನಿ. ಅವರ ದಾಖಲೆಯ 618 ವಿಕೆಟ್ ಗಳ ಗುರಿ ಮುಟ್ಟುವುದೇ ನನ್ನ ಕನಸು. ಒಂದು ವೇಳೆ ನಾನು ಅದನ್ನು ಮುರಿಯದಿದ್ದರೂ ಪರವಾಗಿಲ್ಲ. ಅಷ್ಟೇ ವಿಕೆಟ್ ಪಡೆದರೂ ನನ್ನ ವೃತ್ತಿ ಜೀವನ ಸಾರ್ಥಕವಾಯಿತು ಎಂದುಕೊಳ್ಳುತ್ತೇನೆ. ಆ ದಿನವೇ ನಿವೃತ್ತಿ ಹೊಂದುತ್ತೇನೆ’ ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಟೆಸ್ಟ್ ಕ್ರಿಕೆಟ್ ನಲ್ಲಿ ಅಶ್ವಿನ್ 292 ವಿಕೆಟ್ ಗಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ