Select Your Language

Notifications

webdunia
webdunia
webdunia
webdunia

ಕೊಹ್ಲಿ ಗೆದ್ದರೂ ಟೀಂ ಇಂಡಿಯಾ ಸೋತಿದ್ದೇಕೆ?

ಕೊಹ್ಲಿ ಗೆದ್ದರೂ ಟೀಂ ಇಂಡಿಯಾ ಸೋತಿದ್ದೇಕೆ?
ಮುಂಬೈ , ಸೋಮವಾರ, 23 ಅಕ್ಟೋಬರ್ 2017 (08:27 IST)
ಮುಂಬೈ: ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿಯೇ ಅಚ್ಚರಿಯ ಸೋಲನುಭವಿಸಿದೆ. ಕೀವೀಸ್ ಪಡೆ 6 ವಿಕೆಟ್ ಗಳ ಜಯಭೇರಿ ಭಾರಿಸಿದೆ.

 
ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಆರಂಭದಲ್ಲೇ ಆಘಾತ ನೀಡಿದ್ದು ಕೀವೀಸ್ ಆಟಗಾರರ ಪಾರಮ್ಯಕ್ಕೆ ಸಾಕ್ಷಿಯಾಯಿತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡಿದ್ದರಿಂದ ಭಾರತ ನಿಧಾನಗತಿಯ ರನ್ ಮಾಡಿತು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ ಕೂಡಾ ಖ್ಯಾತಿಗೆ ತಕ್ಕ ಹಾಗೆ ಸಿಡಿಯದೇ ಹೋಗಿದ್ದು ಭಾರತಕ್ಕೆ ಭಾರೀ ಹೊಡೆತ ನೀಡಿತು.

ಇದ್ದವರಲ್ಲಿ ನಾಯಕ ಕೊಹ್ಲಿ ಮಾತ್ರ ತಮ್ಮ ದಾಖಲೆಯ ಪಂದ್ಯವನ್ನು 31 ನೇ ಏಕದಿನ ಶತಕ ದಾಖಲಿಸುವ ಮೂಲಕ ಸ್ಮರಣೀಯವಾಗಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್  ನಲ್ಲಿ ಅತ್ಯಧಿಕ ಶತಕ ಗಳಿಸಿದವರ ಪೈಕಿ ದ್ವಿತೀಯ ಸ್ಥಾನ ಪಡೆದರು. ಅಲ್ಲದೆ ಇದು ಕೊಹ್ಲಿಗೆ 200 ನೇ ಪಂದ್ಯವಾಗಿತ್ತು. ವಿಶೇಷವೆಂದರೆ ಇದರೊಂದಿಗೆ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಪೇರಿಸಿದ ರನ್ ಸಂಖ್ಯೆ 8888 ಗೆ ತಲುಪಿದೆ.

ಆದರೆ ಭಾರತ 50 ಓವರ್ ಗಳಲ್ಲಿ 280 ರನ್ ಗಳಿಸಿದ್ದು, ಸ್ಪರ್ಧಾತ್ಮಕ ಮೊತ್ತವಾದರೂ, ತೀರಾ ಕಠಿಣ ಗುರಿಯಾಗಿರಲಿಲ್ಲ. ಅಷ್ಟೇ ಅಲ್ಲದೆ, ಭಾರತೀಯ ಬೌಲರ್ ಗಳ ದೌರ್ಬಲ್ಯವನ್ನು ಚೆನ್ನಾಗಿಯೇ ಅರಿತಿದ್ದವರಂತೆ ಆಡಿದ ರಾಸ್ ಟೇಲರ್ (95) ಮತ್ತು ಟಾಮ್ ಲ್ಯಾಥಮ್ ಶತಕ ಗಳಿಸಿ 49 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿದರು. ಇದರೊಂದಿಗೆ ಸೋಲರಿಯದೆ ಬೀಗುತ್ತಿದ್ದ ಭಾರತಕ್ಕೆ ಅಚ್ಚರಿಯ ಸೋಲಿನ ಆಘಾತ ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಡೇಜಾ-ಅಶ್ವಿನ್ ಗೆ ಯಾಕೆ ವಿಶ್ರಾಂತಿ? ವಿರಾಟ್ ಕೊಹ್ಲಿ ಹೇಳಿದ್ದು ಹೀಗೆ!