Publish Date: Mon, 23 Oct 2017 (11:34 IST)
Updated Date: Mon, 23 Oct 2017 (11:36 IST)
ಮುಂಬೈ: ವೈಯಕ್ತಿಕ ಕಾರಣಗಳಿಗಾಗಿ ಡಿಸೆಂಬರ್ ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿಯಿಂದ ಬ್ರೇಕ್ ನೀಡುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ.
ಒಂದು ವೇಳೆ ಬಿಸಿಸಿಐ ನಾಯಕನ ಮನವಿಗೆ ಒಪ್ಪಿದರೆ, ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ ಒಂದು ಟೆಸ್ಟ್, ಏಕದಿನ ಪಂದ್ಯ ಮತ್ತು ಟಿ20 ಸರಣಿ ಆಡಲಿದೆ.
ಲಂಕಾ ವಿರುದ್ಧ ಮೂರು ಟೆಸ್ಟ್ ಪಂದ್ಯ ನಿಗದಿಯಾಗಿದ್ದು, ಇದರಲ್ಲಿ ಎರಡು ಪಂದ್ಯಗಳು ನವಂಬರ್ ನಲ್ಲಿ ನಡೆಯಲಿದೆ. ಈ ಪಂದ್ಯಗಳಿಗೆ ಕೊಹ್ಲಿ ಲಭ್ಯರಿರುತ್ತಾರೆ. ಆದರೆ ಡಿಸೆಂಬರ್ ನಲ್ಲಿ ತಮಗೆ ಬ್ರೇಕ್ ನೀಡುವಂತೆ ಕೊಹ್ಲಿ ಮನವಿ ಮಾಡಿದ್ದಾರೆಂದು ಬಿಸಿಸಿಐ ಹೇಳಿದೆ. ಬಿಡುವಿಲ್ಲದ ಕ್ರಿಕೆಟ್ ನಿಂದ ಬಳಲಿರುವ ಕೊಹ್ಲಿ ಜನವರಿಯಲ್ಲಿ ನಡೆಯಲಿರುವ ದ.ಆಫ್ರಿಕಾ ಸರಣಿಗೆ ಫಿಟ್ ಆಗಿರಲು ಬಿಡುವಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ