Publish Date: Wed, 25 Oct 2017 (09:17 IST)
Updated Date: Wed, 25 Oct 2017 (09:18 IST)
ಚೆನ್ನೈ: ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂದರೆ ಧೋನಿ ಎನ್ನುವಷ್ಟು ಪಾಪ್ಯುಲರ್ ಆಗಿತ್ತು. ಆದರೆ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ತಂಡ ಎರಡು ವರ್ಷ ನಿಷೇಧಕ್ಕೊಳಗಾಗಿ ಧೋನಿ ಪುಣೆ ತಂಡದ ಪಾಲಾದಾಗ ಅಭಿಮಾನಿಗಳು ನಿರಾಶರಾಗಿದ್ದರು.
ಇದೀಗ ಮತ್ತೆ ಈ ವರ್ಷದಿಂದ ಕಣಕ್ಕಿಳಿಯುತ್ತಿರುವ ಸಿಎಸ್ ಕೆ ತಂಡಕ್ಕೆ ಧೋನಿ ಮರಳಲು ಇನ್ನೊಂದೇ ಹೆಜ್ಜೆ ಬಾಕಿಯಿದೆ. ಸ್ವತಃ ಐಪಿಎಲ್ ಆಡಳಿತ ಮಂಡಳಿಯೇ ಈ ಬಗ್ಗೆ ಸುಳಿವು ನೀಡಿದೆ.
ಆದರೆ ಸಿಎಸ್ ಕೆ ಕಡೆಯಿಂದ ಈ ಬಗ್ಗೆ ಅಧಿಕೃತ ಪ್ರಕಟಣೆ ಬಂದಿಲ್ಲ. ಆದರೆ ಅಂದು ಆಡಿದ್ದ ಆಟಗಾರರನ್ನೇ ಉಳಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಐಪಿಎಲ್ ಆಡಳಿತ ಮಂಡಳಿ ಹೇಳಿದೆ. ಹೀಗಾದಲ್ಲಿ ಧೋನಿ ಸಿಎಸ್ ಕೆ ಮರಳಲಿರುವುದು ಬಹುತೇಕ ಖಚಿತವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ