Select Your Language

Notifications

webdunia
webdunia
webdunia
webdunia

ವಿದೇಶ ತಂಡದ ಪರ ಆಡಲು ನಾನು ಸಿದ್ಧ: ಶ್ರೀಶಾಂತ್

ವಿದೇಶ ತಂಡದ ಪರ ಆಡಲು ನಾನು ಸಿದ್ಧ: ಶ್ರೀಶಾಂತ್
ನವದೆಹಲಿ , ಶುಕ್ರವಾರ, 20 ಅಕ್ಟೋಬರ್ 2017 (21:01 IST)
ನವದೆಹಲಿ: 2013ರ ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹೇರಿದ ಆಜೀವ ನಿಷೇಧವನ್ನು ಕೇರಳ ಹೈಕೋರ್ಟ್‌ ಎತ್ತಿಹಿಡಿದಿದೆ. ಇದರ ಬೆನ್ನಲ್ಲೇ ಕೇರಳದ ಕ್ರಿಕೆಟಿಗ ಎಸ್‌.ಶ್ರೀಶಾಂತ್‌ ವಿದೇಶಿ ತಂಡದ ಪರ ಆಡಲು ನಾನು ಸಿದ್ಧನಿದ್ದೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಖಾಸಗಿ ಸಂಸ್ಥೆ ಬಿಸಿಸಿಐ ನನಗೆ ಭಾರತದಲ್ಲಿ ಆಡುವುದಕ್ಕೆ ನಿಷೇಧ ಹೇರಿದೆ. ಐಸಿಸಿ ಎಲ್ಲೂ ನಿಷೇಧ ಹೇರಿಲ್ಲ. ಭಾರತ ಬಿಟ್ಟು, ಬೇರೆ ಯಾವುದೇ ರಾಷ್ಟ್ರದಲ್ಲಿ ಕ್ರಿಕೆಟ್‌ ಆಡಬಹುದು. ಯಾಕೆಂದ್ರೆ ನನಗಿನ್ನು 34 ವರ್ಷ. ಹೀಗಾಗಿ ನಾನು ಇನ್ನೂ ಆರು ವರ್ಷ ಕ್ರಿಕೆಟ್‌ ಆಡಲು ಶಕ್ತವಾಗಿದ್ದೇನೆ ಎಂದರು.

ನಾನು ಬೇರೆ ದೇಶದ ಪರ ಆಡಲು ಸ್ವತಂತ್ರನಿದ್ದೇನೆ. ನನಗೀಗ 33 ವರ್ಷ ವಯಸ್ಸು. ಹೆಚ್ಚೆಂದರೆ ಇನ್ನು 6 ವರ್ಷ ನಾನು ಆಡಬಹುದು. ನಾನು ಒಬ್ಬ ಕ್ರಿಕೆಟ್ ಪ್ರೇಮಿಯಾಗಿ ಕ್ರಿಕೆಟ್ ಆಡಲು ಬಯಸುತ್ತೇನೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ-ಕೊಹ್ಲಿ ಹೆಸರಿನ ರೆಸ್ಟೋರೆಂಟ್