Publish Date: Fri, 20 Oct 2017 (11:21 IST)
Updated Date: Fri, 20 Oct 2017 (11:24 IST)
ಮುಂಬೈ: ಧೋನಿ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಬಹು ಮುಖ್ಯ ಕ್ರಿಕೆಟಿಗರು. ಕೊಹ್ಲಿ ನಾಯಕನಾಗಿದ್ದರೂ ಧೋನಿ ಕ್ಯಾಪ್ಟನ್ ಕೂಲ್ ಎಂದೇ ಕರೆಸಿಕೊಳ್ಳುವ ಫೇಮಸ್ ಕ್ರಿಕೆಟಿಗ.
ಇದೀಗ ಇವರಿಬ್ಬರ ಜನಪ್ರಿಯತೆಯ ಲಾಭ ಪಡೆಯಲು ಮುಂಬೈನ ರೆಸ್ಟೋರೆಂಟ್ ಒಂದರ ಮಾಲಿಕರು ತಮ್ಮ ಹೋಟೆಲ್ ಗೆ ಧೋನಿ ಆಂಡ್ ಕೊಹ್ಲಿ ಎಂದು ಹೆಸರಿಟ್ಟಿದ್ದಾರೆ.
ಮುಂಬೈನ ಖಂಡೀವಾಲಿ ಪೂರ್ವದಲ್ಲಿ ಈ ರೆಸ್ಟೋರೆಂಟ್ ಇದೆ. ಈ ಇಬ್ಬರು ಕ್ರಿಕೆಟಿಗರ ಸ್ನೇಹದ ಲಾಭ ಪಡೆಯಲು ರೆಸ್ಟೋರೆಂಟ್ ಇವರ ಹೆಸರಿಟ್ಟಿದೆ. ಧೋನಿ ಮತ್ತು ಕೊಹ್ಲಿಯಂತೆ ಈ ರೆಸ್ಟೋರೆಂಟ್ ಕೂಡಾ ಫೇಮಸ್ಸಾಗುತ್ತಾ ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ