Publish Date: Thu, 19 Oct 2017 (10:39 IST)
Updated Date: Thu, 19 Oct 2017 (10:41 IST)
ಮುಂಬೈ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತಮ್ಮ ಹುದ್ದೆಗಾಗಿ ಪಡೆಯುತ್ತಿರುವ ವೇತನ ನಾಯಕ ಕೊಹ್ಲಿಗಿಂತಲೂ ಹೆಚ್ಚು ಕ್ರೀಡಾ ವಾಹಿನಿಯೊಂದು ವರದಿ ಮಾಡಿದೆ.
ರವಿ ಶಾಸ್ತ್ರಿ ಪ್ರತೀ ವರ್ಷಕ್ಕೆ ತಮ್ಮ ಕೆಲಸಕ್ಕೆ 1.17 ಮಿಲಿಯನ್ ಡಾಲರ್ ಸಂಭಾವನೆ ಪಡೆಯಲಿದ್ದಾರೆ. ನಾಯಕ ವಿರಾಟ್ ಕೊಹ್ಲಿಗೆ ಹೋಲಿಸಿದರೆ ಇದೀಗ ಹೆಚ್ಚು. ವಿರಾಟ್ ಕೊಹ್ಲಿ ಪ್ರತೀ ವರ್ಷಕ್ಕೆ 1 ಮಿಲಿಯನ್ ಡಾಲರ್ ಸಂಭಾವನೆ ಪಡೆಯುತ್ತಾರೆ ಎಂದು ವಾಹಿನಿ ವರದಿ ಮಾಡಿದೆ.
ಅಷ್ಟೇ ಅಲ್ಲದೆ, ವಿಶ್ವದ ಯಾವುದೇ ಕೋಚ್ ಗೂ ಇಷ್ಟು ವೇತನವಿಲ್ಲವಂತೆ! ಸಂಭಾವನೆ ವಿಷಯದಲ್ಲಿ ಶಾಸ್ತ್ರಿ ನಂ.1 ಆದರೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡದ ಕೋಚ್ ಗಳು ಕ್ರಮವಾಗಿ ಎರಡು ಮತ್ತು ಮೂರನೇ ಕ್ರಮಾಂಕ ಪಡೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ