Publish Date: Thu, 19 Oct 2017 (09:30 IST)
Updated Date: Thu, 19 Oct 2017 (09:32 IST)
ಮುಂಬೈ: ಸ್ಪಿನ್ ದಿಗ್ಗಜ, ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ 47 ನೇ ಜನ್ಮ ದಿನಕ್ಕೆ ಟೀಂ ಇಂಡಿಯಾದ ಬಹುತೇಕ ಆಟಗಾರರು ವಿಶ್ ಮಾಡಿದರೂ, ನಾಯಕ ಕೊಹ್ಲಿ ಮಾತ್ರ ಶುಭಾಷಯ ಕೋರದೇ ಇರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಡುವಿನ ವಿರಸದಿಂದಾಗಿ ಟೀಂ ಇಂಡಿಯಾ ಕೋಚ್ ಹುದ್ದೆಗೆ ಕುಂಬ್ಳೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಇವರಿಬ್ಬರ ಸಂಬಂಧ ಸಂಪೂರ್ಣ ಹಳಸಿತ್ತು.
ಈ ಹಿನ್ನಲೆಯಲ್ಲಿ ಸ್ಪಿನ್ ದಿಗ್ಗಜನಿಗೆ ಶುಭಾಷಯ ಕೋರದ ಕೊಹ್ಲಿ ಮೇಲೆ ಟ್ವಿಟರಿಗರು ಸಿಟ್ಟಾಗಿದ್ದಾರೆ. ಕೊಹ್ಲಿಗೆ ಫುಟ್ ಬಾಲ್ ಆಡಲು, ಟಿವಿಯಲ್ಲಿ ಕಾಣಿಸಿಕೊಳ್ಳಲು ಸಮಯವಿದೆ. ಆದರೆ ಮಾಜಿ ಕೋಚ್ ಗೆ ವಿಶ್ ಮಾಡುವಷ್ಟು ಸಮಯ, ಶಕ್ತಿ ಅವರಿಗಿಲ್ಲವೇ ಎಂದು ಹಲವರು ಜರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ