Publish Date: Mon, 16 Oct 2017 (11:41 IST)
Updated Date: Mon, 16 Oct 2017 (11:43 IST)
ಮುಂಬೈ: ವಿಶ್ವವನ್ನೇ ನಡುಗಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಬೆಸ್ಟ್ ಬೌಲಿಂಗ್ ಮಾಡಿದ ಬೌಲರ್ ಯಾರು ಗೊತ್ತಾ? ಅಮೀರ್ ಖಾನ್ ಜತೆಗಿನ ಸಂದರ್ಶನದಲ್ಲಿ ಅವರೇ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪ್ರಸಕ್ತ ಬೌಲರ್ ಗಳ ಪೈಕಿ ತನ್ನನ್ನು ಹೆಚ್ಚು ಕಾಡಿದ್ದು, ತನ್ನ ಪಾಲಿನ ಬೆಸ್ಟ್ ಬೌಲರ್ ಎಂದರೆ ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ನಿಮಗೆ ಹೆಚ್ಚು ಸವಾಲೆನಿಸಿದ ಬೌಲರ್ ಯಾರು ಎಂದು ಕೇಳಿದಾಗ ಕೊಹ್ಲಿ ‘ಈಗಿನ ಜಮಾನದಲ್ಲಿ ಪಾಕಿಸ್ತಾನದ ಮೊಹಮ್ಮದ್ ಅಮೀರ್ ಅಗ್ರ ಸ್ಥಾನದಲ್ಲಿ ಬರುತ್ತಾರೆ. ಅವರನ್ನು ಎದುರಿಸುವಾಗ ನೀವು ನಿಮ್ಮ ಉತ್ಕೃಷ್ಟ ಜಾಣತನ ಪ್ರದರ್ಶಿಸಬೇಕಾಗುತ್ತದೆ. ಅವರು ನಿಜಕ್ಕೂ ಕಠಿಣ ಸವಾಲೆಸೆಯುತ್ತಾರೆ’ ಎಂದು ಕೊಹ್ಲಿ ಸಾಂಪ್ರದಾಯಿಕ ಎದುರಾಳಿ ತಂಡದ ವೇಗಿಯನ್ನು ಹೊಗಳಿದ್ದಾರೆ. ಹಲವು ಬಾರಿ ಅಮೀರ್ ಕೊಹ್ಲಿ ವಿಕೆಟ್ ಕಬಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ