Publish Date: Sun, 15 Oct 2017 (11:27 IST)
Updated Date: Sun, 15 Oct 2017 (11:29 IST)
ಮುಂಬೈ: ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು, ಮತ್ತೊಮ್ಮೆ ಹಿರಿಯ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾಗೆ ಕೊಕ್ ನೀಡಲಾಗಿದೆ.
ರಾಷ್ಟ್ರೀಯ ತಂಡದಿಂದ ಕಡೆಗಣಿಸಲ್ಪಟ್ಟ ಜಡೇಜಾ ಆ ಹತಾಶೆಯನ್ನು ರಣಜಿಯಲ್ಲಿ ಬೌಲರ್ ಗಳ ಮೇಲೆ ಸವಾರಿ ಮಾಡುವ ಮೂಲಕ ತೋರಿದ್ದಾರೆ. ರಾಜ್ ಕೋಟ್ ಪರ ಆಡುತ್ತಿರುವ ಜಡೇಜಾ ಜಮ್ಮು ಕಾಶ್ಮೀರ ತಂಡದ ವಿರುದ್ಧ ಅಜೇಯವಾಗಿ 150 ರನ್ ಚಚ್ಚಿದ್ದಾರೆ.
ಅಶ್ವಿನ್ ಅಲ್ಲದೆ, ಕನ್ನಡಿಗ ಕೆಎಲ್ ರಾಹುಲ್ ಗೂ ಕೊಕ್ ನೀಡಲಾಗಿದೆ. ಆದರೆ ಇನ್ನೊಬ್ಬ ಕನ್ನಡಿಗ ಮನೀಶ್ ಪಾಂಡೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹಿರಿಯ ವೇಗಿ ಉಮೇಶ್ ಯಾದವ್ ರನ್ನೂ ಆಯ್ಕೆ ಸಮಿತಿ ಕಡೆಗಣಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ