Publish Date: Fri, 13 Oct 2017 (11:53 IST)
Updated Date: Fri, 13 Oct 2017 (11:57 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಗೆ ಆಯ್ಕೆಯಾಗದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಅಜಿಂಕ್ಯಾ ರೆಹಾನೆ ತನ್ನ ತವರು ಮುಂಬೈ ತಂಡದ ಆಯ್ಕೆಗಾರರಿಗೆ ಶಾಕ್ ಕೊಟ್ಟಿದ್ದಾರೆ.
ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಮುಂಬೈ ಮೊದಲ ಪಂದ್ಯವನ್ನು ಮಧ್ಯಪ್ರದೇಶದ ವಿರುದ್ಧ ನಾಳೆಯಿಂದ ಆಡಲಿದೆ. ಆದರೆ ಈ ಪಂದ್ಯಕ್ಕೆ ತಾನು ಲಭ್ಯವಿರುವುದಿಲ್ಲ ಎಂದು ರೆಹಾನೆ ಶಾಕ್ ಕೊಟ್ಟಿದ್ದಾರೆ.
ಸದ್ಯ ರಾಷ್ಟ್ರೀಯ ತಂಡದಲ್ಲೂ ಅವಕಾಶ ಕಳೆದುಕೊಂಡಿರುವ ರೆಹಾನೆ ಆಫ್ರಿಕಾದ ದ್ವೀಪ ರಾಷ್ಟ್ರದಲ್ಲಿ ಪತ್ನಿ ಜತೆ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಎರಡು ವಾರ ಬ್ರೇಕ್ ತೆಗೆದುಕೊಂಡ ನಂತರವೂ ತವರು ತಂಡಕ್ಕೆ ಅಲಭ್ಯರಾಗಿರುವ ರೆಹಾನೆ ಮೇಲೆ ಮುಂಬೈ ಆಯ್ಕೆಗಾರ ಅಜಿತ್ ಅಗರ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ