Publish Date: Thu, 12 Oct 2017 (10:48 IST)
Updated Date: Thu, 12 Oct 2017 (10:50 IST)
ನವದೆಹಲಿ: ಟೀಂ ಇಂಡಿಯಾ ವಿರುದ್ಧ ದ್ವಿತೀಯ ಟಿ20 ಪಂದ್ಯ ಗೆದ್ದು ಹೋಟೆಲ್ ಕೊಠಡಿಗೆ ಮರಳುತ್ತಿದ್ದ ಆಸ್ಟ್ರೇಲಿಯಾ ಆಟಗಾರರ ಬಸ್ ಮೇಲೆ ಕಲ್ಲೆಸೆದರೂ ಭಾರತೀಯ ಅಭಿಮಾನಿಗಳ ಮೇಲೆ ಅಭಿಪ್ರಾಯ ಬದಲಾಗಿಲ್ಲ ಎಂದು ಕ್ರಿಕೆಟಿಗ ಆಡಂ ಜಂಪಾ ಹೇಳಿದ್ದಾರೆ.
ಬಸ್ ಮೇಲೆ ಕಲ್ಲು ಬಿದ್ದ ಘಟನೆ ನಿಜವಾಗಲೂ ಬೇಸರದ ಸಂಗತಿ. ಇಂತಹ ಘಟನೆ ಅರೆಕ್ಷಣ ನಮ್ಮನ್ನು ವಿಚಲಿತನಾಗಿಸುವುದು ಸತ್ಯ. ಆದರೆ ಭಾರತೀಯ ಅಭಿಮಾನಿಗಳ ಮೇಲೆ ನಮಗೆ ಗೌರವವಿದೆ. ಇಲ್ಲಿನ ಅಭಿಮಾನಿಗಳಿಗೆ ಕ್ರಿಕೆಟ್ ಮೇಲೆ ವಿಶೇಷ ಪ್ರೀತಿಯಿದೆ. ಜೋರಾಗಿ ಕಿರುಚುತ್ತಿರುತ್ತಾರೆ, ಉತ್ಸಾಹ ತುಂಬುತ್ತಾರೆ. ಒಬ್ಬ ಮಾಡಿದ ತಪ್ಪಿಗೆ ಇಡೀ ಭಾರತೀಯ ಅಭಿಮಾನಿಗಳನ್ನೇ ದೂಷಿಸುವುದು ತಪ್ಪು’ ಎಂದು ಜಂಪಾ ಹೇಳಿಕೊಂಡಿದ್ದಾರೆ.
ದ್ವಿತೀಯ ಟಿ20 ಮುಗಿಸಿ ಗುವಾಹಟಿ ಮೈದಾನದಿಂದ ತೆರಳುತ್ತಿದ್ದ ಆಸ್ಟ್ರೇಲಿಯಾ ತಂಡದ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದರು. ಈ ಬಗ್ಗೆ ಅಸ್ಸಾಂ ಸರ್ಕಾರ ತನಿಖೆಗೂ ಆದೇಶಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ