Publish Date: Wed, 11 Oct 2017 (09:11 IST)
Updated Date: Wed, 11 Oct 2017 (09:27 IST)
ಗುವಾಹಟಿ: ಧೋನಿ ವಿಕೆಟ್ ಹಿಂದೆ ನಿಂತರೆ ಮಿಂಚಿನಂತೆ ಚುರುಕು. ಬ್ಯಾಟ್ಸ್ ಮನ್ ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಸ್ಟಂಪ್ ಔಟ್ ಮಾಡಿರುತ್ತಾರೆ. ಅಂತಹಾ ಖ್ಯಾತಿಯ ಧೋನಿ ಇದೇ ಮೊದಲ ಬಾರಿಗೆ ತಾವೇ ಸ್ಟಂಪ್ ಔಟ್ ಆಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲಿ ಧೋನಿ ಟಿ20 ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಸ್ಟಂಪ್ ಔಟ್ ಆದರು. ಅತೀ ಹೆಚ್ಚು ಸ್ಟಂಪ್ ಔಟ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದ ಧೋನಿ ಈ ಮೂಲಕ ತಮ್ಮದೇ ಬಲೆಗೆ ಬಿದ್ದರು.
ಇನ್ನೊಂದೆಡೆ ನಾಯಕ ವಿರಾಟ್ ಕೊಹ್ಲಿ ಕೂಡಾ ಕಳೆದ 40 ಟಿ20 ಇನಿಂಗ್ಸ್ ಗಳಲ್ಲಿ ಇದೇ ಮೊದಲ ಬಾರಿಗೆ ಶೂನ್ಯಕ್ಕೆ ಔಟಾದ ಕುಖ್ಯಾತಿಗೆ ಒಳಗಾದರು. ಇಷ್ಟು ಸುದೀರ್ಘ ಅವಧಿಯ ನಂತರ ಶೂನ್ಯ ಸಂಪಾದಿಸಿದ ಬ್ಯಾಟ್ಸ್ ಮನ್ ಗಳ ಸಾಲಿನಲ್ಲಿ ಅವರೀಗ ನಂ.1.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ