Select Your Language

Notifications

webdunia
webdunia
webdunia
webdunia

ಧೋನಿ ಹೆಲಿಕಾಪ್ಟರ್ ಶಾಟ್ ಕಾಪಿ ಮಾಡಲು ಹೊರಟ ‘ಮಾಜಿ’ಗಳು! ಮುಂದೇನಾಯ್ತು?

ಧೋನಿ ಹೆಲಿಕಾಪ್ಟರ್ ಶಾಟ್ ಕಾಪಿ ಮಾಡಲು ಹೊರಟ ‘ಮಾಜಿ’ಗಳು! ಮುಂದೇನಾಯ್ತು?
ಮುಂಬೈ , ಮಂಗಳವಾರ, 10 ಅಕ್ಟೋಬರ್ 2017 (08:34 IST)
ಮುಂಬೈ: ಧೋನಿ ಎಂದರೆ ಅವರ ಹೆಲಿಕಾಪ್ಟರ್ ಶಾಟ್ ನಿಂದಲೇ ಫೇಮಸ್ಸು. ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದೂ ಇದೇ ಟ್ರೇಡ್ ಮಾರ್ಕ್ ಶಾಟ್. ಈ ಶಾಟ್ ನ್ನು ಕಾಪಿ ಮಾಡಲು ಎಷ್ಟೇ ಕ್ರಿಕೆಟಿಗರು ಪ್ರಯತ್ನಿಸುತ್ತಿರುತ್ತಾರೆ.

 
ಹಾಗೆಯೇ ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಮತ್ತು ಆಸೀಸ್ ನ ಮಾಜಿ ವೇಗಿ ಬ್ರೆಟ್ ಲೀ ಭಾರತ-ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯದ ವೇಳೆ ಹೆಲಿಕಾಪ್ಟರ್ ಶಾಟ್ ಹೊಡೆಯುವ ಪ್ರಯತ್ನ ನಡೆಸಿದರು.

ಆದರೆ ಮೂವರೂ ಧೋನಿಯ ಟ್ರೇಡ್ ಮಾರ್ಕ್ ಶಾಟ್ ಹೊಡೆಯಲು ವಿಫಲರಾಗಿದ್ದರು. ಆದರೂ ಸೆಹ್ವಾಗ್ ಆಲ್ ಮೋಸ್ಟ್ ಧೋನಿ ಹೊಡೆತದ ಹತ್ತಿರಕ್ಕೇ ಬಂದರೂ ಧೋನಿಯ ಹಾಗೇ ಹೊಡೆಯಲು ಸಾಧ್ಯವಾಗಲಿಲ್ಲ. ಈ ಮಾಜಿ ಕ್ರಿಕೆಟಿಗರೆಲ್ಲಾ ಪಂದ್ಯದ ವೀಕ್ಷಕ ವಿವರಣೆ ಮಾಡುತ್ತಿದ್ದವರು ಕೆಲ ಕಾಲ ನೆರೆದಿದ್ದವರಿಗೆ ಮನರಂಜನೆಯನ್ನೂ ಒದಗಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ಹೊಸ ರೂಲ್ಸ್ ನಿಂದ ಭಾರತ-ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಗೊಂದಲ