Publish Date: Tue, 10 Oct 2017 (08:45 IST)
Updated Date: Tue, 10 Oct 2017 (08:47 IST)
ಗುವಾಹಟಿ: ಟೀಂ ಇಂಡಿಯಾದ ಹೊಸ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ ಶೇನ್ ವಾರ್ನ್ ಗಿದ್ದ ಪ್ರತಿಭೆಯ ಅರ್ಧದಷ್ಟು ನನಗೆ ಬಂದರೂ ಜೀವನ ಸಾರ್ಥಕ ಎಂದು ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಇಂದು ದ್ವಿತೀಯ ಟಿ20 ಪಂದ್ಯವಾಡುತ್ತಿರುವ ಟೀಂ ಇಂಡಿಯಾದ ಯುವ ಸ್ಪಿನ್ನರ್ ಕುಲದೀಪ್ ತಮ್ಮ ವಿಶಿಷ್ಟ ಬೌಲಿಂಗ್ ನಿಂದಾಗಿ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ.
ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಮೋಡಿಗೆ ಎದುರಾಳಿಗಳೂ ಮನಸೋತಿದ್ದಾರೆ. ಇವರಿಬ್ಬರಿಂದಾಗಿ ಹಿರಿಯ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಕೂಡಾ ಮೂಲೆಗುಂಪಾಗಿದ್ದಾರೆ. ಆದರೆ ತಾವು ಯಾವುದೇ ಕಾರಣಕ್ಕೂ ಅಶ್ವಿನ್-ಜಡೇಜಾಗೆ ಪೈಪೋಟಿ ನೀಡುವುದಿಲ್ಲ ಎಂದಿದ್ದಾರೆ. ಅವರಿಬ್ಬರೂ ಈಗಾಗಲೇ ಭಾರತ ತಂಡಕ್ಕೆ ಒಳ್ಳೆಯದನ್ನು ಮಾಡಿದ್ದಾರೆ. ನಾನು ಮತ್ತು ಚಾಹಲ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕುಲದೀಪ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ