ಮುಂಬೈ: ಟೀಂ ಇಂಡಿಯಾದಿಂದ ಸ್ಥಾನ ವಂಚಿತರಾಗಿರುವ ಕ್ರಿಕೆಟಿಗ ಯುವರಾಜ್ ಸಿಂಗ್ ಇದೀಗ ಐಪಿಎಲ್ ಬಾಕಿ ವೇತನಕ್ಕಾಗಿ ಬಿಸಿಸಿಐ ಹಿಂದೆ ಬಿದ್ದಿದ್ದಾರೆ.
									
										
								
																	
 
ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗೆ ತಂಡಕ್ಕೆ ಆಯ್ಕೆಯಾಗದೇ ಇರುವ ಯುವರಾಜ್ ಸಿಂಗ್ ಗೆ ಐಪಿಎಲ್ ನಿಂದ ಕಳೆದ ವರ್ಷ ಸಿಗಬೇಕಿದ್ದ 3 ಕೋಟಿ ರೂ. ಗಳನ್ನು ಬಿಸಿಸಿಐ ಬಾಕಿ ಉಳಿಸಿಕೊಂಡಿದೆ.
									
			
			 
 			
 
 			
					
			        							
								
																	ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಯುವರಾಜ್ ಪರವಾಗಿ ಅವರ ತಾಯಿ ಶಬ್ನಮ್ ಸಿಂಗ್ ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. 2016 ರ ಟಿ20 ವಿಶ್ವಕಪ್ ನಲ್ಲಿ ಆಡುವಾಗ ಗಾಯಗೊಂಡಿದ್ದ ಯುವಿ ನಂತರ ಐಪಿಎಲ್ ನ ಏಳು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಬಿಸಿಸಿಐ ನಿಯಮದ ಪ್ರಕಾರ ಭಾರತ ಪರ ಆಡುವಾಗ ಗಾಯಗೊಂಡು ಐಪಿಎಲ್ ಗೆ ಅಲಭ್ಯರಾದರೆ ಆಟಗಾರರಿಗೆ ಮಂಡಳಿಯೇ ಪರಿಹಾರ ಧನ ಕೊಡುತ್ತದೆ.
									
										
								
																	ಅದರಂತೆ  ಯುವಿಗೆ ಬಿಸಿಸಿಐ  ಬಾಕಿ ಮೊತ್ತ ಸುಮಾರು 3 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಆದರೆ ಹಲವಾರು ಬಾರಿ ಯುವರಾಜ್ ಮಂಡಳಿಗೆ ಪತ್ರ ಬರೆದರೂ ಬಾಕಿ ಮೊತ್ತ ಸಿಕ್ಕಿಲ್ಲವಂತೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ