Publish Date: Sat, 23 Sep 2017 (09:40 IST)
Updated Date: Sat, 23 Sep 2017 (09:43 IST)
ಚೆನ್ನೈ: ಚೆನ್ನೈಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರಥಮ ಏಕದಿನ ಪಂದ್ಯ ಮುಗಿದ ಬಳಿಕ ಕ್ರಿಕೆಟಿಗ ಧೋನಿ ತಮ್ಮ ಹಳೆಯ ಐಪಿಎಲ್ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಮಾಲಿಕ ಎನ್. ಶ್ರೀನಿವಾಸನ್ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಶ್ರೀನಿವಾಸನ್ ಅವರ ಮುಂಬೈ ಇಂಡಿಯಾ ಸಿಮೆಂಟ್ಸ್ ಸಂಸ್ಥೆಗೆ ಭೇಟಿ ನೀಡಿದ ಧೋನಿ ಅಲ್ಲಿನ ಜಿಮ್ ನಲ್ಲಿ ಕೆಲ ಕಾಲ ಸಮಯ ಕಳೆದರು. ಅಷ್ಟೇ ಅಲ್ಲದೆ, ಅಲ್ಲಿನ ಸಿಬ್ಬಂದಿಗಳ ಜತೆಗೂ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀನಿವಾಸನ್ ಕೂಡಾ ಸಂಸ್ಥೆಯಲ್ಲಿದ್ದರು ಎನ್ನಲಾಗಿದೆ. ಮುಂದಿನ ಐಪಿಎಲ್ ಆವೃತ್ತಿಗೆ ನಿಷೇಧ ಶಿಕ್ಷೆ ಮುಗಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಗೆ ಮರಳಲಿದೆ. ಸದ್ಯ ಪುಣೆ ಪರ ಆಡುತ್ತಿರುವ ಧೋನಿ ಮುಂದಿನ ಆವೃತ್ತಿಗೆ ಮತ್ತೆ ಚೆನ್ನೈ ತಂಡಕ್ಕೆ ಮರಳುತ್ತಾರೆ ಎಂಬ ಸುದ್ದಿಯಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಧೋನಿ-ಶ್ರೀನಿವಾಸನ್ ಭೇಟಿ ಮಹತ್ವ ಪಡೆದುಕೊಂಡಿದೆ.