Publish Date: Thu, 21 Sep 2017 (17:28 IST)
Updated Date: Thu, 21 Sep 2017 (17:30 IST)
ದಕ್ಷಿಣ ಭಾರತ ಮಾದಕ ಸುಂದರಿ ಲಕ್ಷ್ಮೀ ರೈ ಜೂಲಿ-2 ಚಿತ್ರದ ಟ್ರೇಲರ್ ಮೂಲಕವೇ ಬಾಲಿವುಡ್`ನಲ್ಲಿ ಬಿಸಿ ಏರಿಸಿದ್ದಾರೆ. ಜೂಲಿ ಮೊದಲ ಚಿತ್ರದ ಸೀನ್`ಗಳಿಗಿಂತಲೂ ಲಕ್ಷ್ಮೀ ರೈ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡು ಸುದ್ದಿ ಮಾಡಿದ್ದಾರೆ.
ತಮ್ಮ ಈ ಚಿತ್ರದ ಪ್ರಚಾರದ ವೇಳೆ ಲಕ್ಷ್ಮೀ ರೈಗೆ ಹಲವು ಬಾರಿ ಮುಜುಗರ ಮೂಡಿಸಿದ ಪ್ರಶ್ನೆಯೊಂದು ಎದುರಾಯ್ತು. ಅಲ್ಲಿದ್ದ ಒಬ್ಬ ಪತ್ರಕರ್ತ ಧೋನಿ ಬಗ್ಗೆ ಪ್ರಶ್ನೆ ಹರಿಬಿಟ್ಟಿದ್ದಾರೆ. ಧೋನಿ ಬಗೆಗಿನ ಪ್ರಶ್ನೆಗೆ ಕೋಪದಿಂದ ಉತ್ತರಿಸುತ್ತಿದ್ದ ಲಕ್ಷ್ಮೀ ರೈ ಈ ಬಾರಿ ತಮಾಷೆಯಾಗಿ ಉತ್ತರ ಕೊಟ್ಟಿದ್ದಾರೆ. ಧೋನಿ ಯಾರವರು..? ಎಂದು ಪ್ರಶ್ನಿದ್ದಾರೆ.
ಬಳಿಕ ಮಾತು ಮುಂದುವರೆಸಿದ ಲಕ್ಷ್ಮೀ ರೈ, ಇದಕ್ಕೆ ಪೂರ್ಣವಿರಾಮ ಇಡಬೇಕಿದೆ. ಅದು ತುಂಬಾ ಹಳೆಯ ಸುದ್ದಿ. ಈಗ ಅವರು ಮದುವೆಯಾಗಿ ಸಂತೋಷದಿಂದಿದ್ದಾರೆ.ಅವರಿಗೊಂದು ಮಗುವೂ ಇದೆ. ಕೆಲವೊಂದು ವಿಷಯಗಳು ವರ್ಕೌಟ್ ಆಗದಿದ್ದಾಗ ಬಿಟ್ಟು ಮುಂದಕ್ಕೆ ಹೋಗಬೇಕು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ